ಮೈಸೂರು

ಕಾವಲುಗಾರನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ

ಕಾವಲುಗಾರನೊಬ್ಬನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈತನ ಸಾವಿನ ಬಗ್ಗೆ
ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೃತನನ್ನು ಅಶೋಕಪುರಂನ  ನಿವಾಸಿ ಶಿವಸ್ವಾಮಿ ಅಲಿಯಾಸ್ ಶಿವಣ್ಣ (50) ಎಂದು ಗುರುತಿಸಲಾಗಿದೆ. ತೋಟವೊಂದರಲ್ಲಿ ಕಾವಲುಗಾರನ ಕೆಲಸ ಮಾಡಿಕೊಂಡಿದ್ದ ಶಿವಣ್ಣ  ಈ ಹಿಂದೆ ವಕೀಲರೊಬ್ಬರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ.
ಈ  ನಡುವೆ ವಕೀಲರು ಹಾಗೂ ಶಿವಣ್ಣ ಪತ್ನಿ ನಡುವೆ ಅನೈತಿಕ ಸಂಬಂಧವಿದ್ದು, ಶಿವಣ್ಣ
ಇಲ್ಲದ ಸಮಯದಲ್ಲಿ ಮನೆಗೆ ಬಂದು ಹೋಗುತ್ತಿದ್ದರೆನ್ನಲಾಗಿದೆ. ಈ ವಿಷಯವನ್ನು ಅಕ್ಕ,
ಪಕ್ಕದ ಮನೆಯವರು ಶಿವಣ್ಣ ಅವರಿಗೆ ತಿಳಿಸಿದ್ದರಿಂದ ವಕೀಲರು ಮನೆಯಲ್ಲಿ ಇರುವಾಗ
ಸಿಕ್ಕಿ ಬಿದ್ದಿದ್ದನ್ನು ವಿಡಿಯೋ ಚಿತ್ರೀಣ ಮಾಡಿಕೊಳ್ಳಲಾಗಿದ್ದು, ಈ ಕುರಿತು ಗಲಾಟೆ ನಡೆದಿತ್ತು. ಗಲಾಟೆಯ ಬಳಿಕ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಗಂಡನನ್ನು ತೊರೆದು ಹೋಗಿದ್ದಳೆನ್ನಲಾಗಿದೆ. ಇದರಿಂದ ಒಂಟಿಯಾಗಿದ್ದ ಶಿವಣ್ಣ, ಮಾನಸಿಕ ಖಿನ್ನತೆಗೂ ಒಳಗಾಗಿದ್ದು, ಸದಾ ಮೌನವಾಗಿ ಇರುತ್ತಿದ್ದನೆನ್ನಲಾಗಿದೆ. ಗುರುವಾರ ರಾತ್ರಿ ಕೆಲಸಕ್ಕೆ ಹೋದ ಶಿವಣ್ಣ ಮೃತದೇಹ ಅಶೋಕಪುರಂನ ಖಾಲಿಖಾಗದಲ್ಲಿ ಸೀಮೆಎಣ್ಣೆ ಸುರಿದು ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ.
ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: