ಮೈಸೂರು

ತಾಮ್ರದ ತಂತಿಯನ್ನು ಕಳುವುಗೈಯ್ಯುತ್ತಿದ್ದ ಕಳ್ಳರ ಬಂಧನ

ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಳವಡಿಸಲಾದ ತಾಮ್ರದ ತಂತಿ ಬೇಲಿಗಳನ್ನು ಕಳವು ಗೈದು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಕಳುವು ನಡೆಸಿ ಮಾರಾಟ ಮಾಡಲು ಯತ್ನಿಸಿದವರನ್ನು ಮಂಡ್ಯ ನಿವಾಸಿ ಲೋಕೇಶ್, ತಮಿಳುನಾಡು ಮೂಲದ ಮುರುಗೇಶ್ ಎಂದು ಗುರುತಿಸಲಾಗಿದೆ. ಇವರು ತಾಮ್ರದ ತಂತಿಬೇಲಿಗಳನ್ನು ಕಳುವುಗೈದು ಮಾರಾಟ ಮಾಡುತ್ತಿದ್ದರು. ಹೀಗೆ ಮಾರಾಟ ಮಾಡುತ್ತಿರುವಾಗ ಗಸ್ತಿನಲ್ಲಿದ್ದ ಗ್ರಾಮಾಂತರ ಪೊಲೀಸರು ಚೀಲದಲ್ಲಿರುವುದು ಏನೆಂದು ಪ್ರಶ್ನಿಸಿದ್ದಾರೆ. ಉತ್ತರ ಕೊಡಲು ಹಿಂಜರಿದಾಗ ತೆರಳಿ ಪರೀಕ್ಷಿಸಲಾಗಿ ಅದರಲ್ಲಿ ತಾಮ್ರದ ತಂತಿಗಳಿರುವುದು ಕಂಡು ಬಂದಿದೆ. ಅವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಕಳುವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 35ಕೆ.ಜಿ ತಾಮ್ರದ ತಂತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಪತ್ತೆ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆಯ ಸಬ್ ಇನ್ಸಪೆಕ್ಟರ್ ಜಯಪ್ರಕಾಶ್  ಹಾಗೂ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್  ನೇತೃತ್ವದಲ್ಲಿ ಸಿಬ್ಬಂದಿಗಳಾದ ಹರೀಶ್, ಜಾಫರ್ ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: