ಮೈಸೂರು

ಸ್ವಾತಂತ್ರ್ಯೋತ್ಸವ ಪ್ರಯುಕ್ತ ತಾಲೀಮು

ಮೈಸೂರು,ಆ.13:- ಶನಿವಾರ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದ್ದು ಇಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಪರೇಡ್ ಪ್ರದರ್ಶನದ ತಾಲೀಮು ನಡೆಯಿತು.

ಬೆಳಿಗ್ಗೆ 8ಗಂಟೆಯಿಂದ 10ಗಂಟೆಯವರೆಗೆ ನಡೆದ ಈ ತಾಲೀಮಿನಲ್ಲಿ ಸಿವಿಲ್ ಪೊಲೀಸ್, ಕೆಎಸ್ ಆರ್.ಪಿ, ಸಿಎಆರ್, ಡಿಎಆರ್, ಮೌಂಟೆಡ್ ಪೊಲೀಸ್, ಅಗ್ನಿಶಾಮಕ ದಳ, ಗೃಹರಕ್ಷಕದಳದ ತುಕಡಿಗಳು ಭಾಗವಹಿಸಿದ್ದವು.

ಎಲ್ಲರೂ ಸಮವಸ್ತ್ರಗಳನ್ನು ಧರಿಸಿ ಶಿಸ್ತಿನಿಂದ ತಾಲೀಮು ನಡೆಸುತ್ತಿರುವುದು ಕಂಡು ಬಂತು.  ತಾಲೀಮಿನಲ್ಲಿ ಪೊಲೀಸ್ ಆಯುಕ್ತರಾದ ಡಾ.ಚಂದ್ರ ಗುಪ್ತ, ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಉಪಸ್ಥಿತರಿದ್ದರು.

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.  ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ ವಂದನೆ ಸಲ್ಲಿಸಲಿದ್ದಾರೆ. ಕೊರೋನಾ ನಿರ್ವಹಣಾ ಕಾರ್ಯನಿರತ ಕೋವಿಡ್ ವಾರಿಯರ್ ಗಳಾದ ವೈದ್ಯರು,ಶುಶ್ರೂಷಕರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಈ ಬಾರಿಯ ಸ್ವಾತಂತ್ರ್ಯೋತ್ಸವ ದಿನಾಚರಣೆಯ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: