ಮೈಸೂರು

ಎನ್ಐಇಯಲ್ಲಿ ಹ್ಯಾಸ್ಕೇಲ್ ಕಾರ್ಯಚಟುವಟಿಕೆಯ ಪ್ರೋಗ್ರಾಮಿಂಗ್ ತರಬೇತಿ

ಮಾನಂದವಾಡಿ ರಸ್ತೆ: ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್(ಎನ್‍ಐಇ) ವಿದ್ಯಾರ್ಥಿಗಳಿಗೆ ಸೆ.17 ಮತ್ತು 18ರಂದು ಹ್ಯಾಸ್ಕೇಲ್ ಕಾರ್ಯಚಟುವಟಿಕೆಯ ಪ್ರೋಗ್ರಾಮಿಂಗ್ ಮೇಲೆ ಎರಡು ದಿನಗಳ ತರಬೇತಿ ಕಾರ್ಯಾಗಾರ ನಡೆಯಿತು.

ಚೆನ್ನೈ ಮ್ಯಾಥಮೆಟಿಕಲ್ ಇನ್ಸ್‍ಟಿಟ್ಯೂಟ್‍ನ ಅಸೋಸಿಯೇಟ್ ಪ್ರೊಫೆಸರ್ ಡಾ.ಎಸ್.ಪಿ. ಸುರೇಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಈ ತರಬೇತಿಯು ವಿದ್ಯಾರ್ಥಿಗಳಿಗೆ ನೂತನ ಆವಿಷ್ಕಾರಗಳಾದ ಉಪಕರಣಗಳು, ತಂತ್ರಗಳನ್ನು ಅರಿತು ಹ್ಯಾಸ್ಕೇಲ್‍ನ ಅಧ್ಯಯನ ಮತ್ತು ವಿಭಿನ್ನ ಮಾದರಿಯಲ್ಲಿ ಪ್ರೋಗ್ರಾಮಿಂಗ್ ನಡೆಸಲು ಸಹಕಾರಿಯಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಕಂಪೆನಿಗಳಲ್ಲಿ ಹ್ಯಾಸ್ಕೇಲ್‍ ಅಳವಡಿಕೆಯು ಹೆಚ್ಚಾಗಿದೆ. ಗೂಗಲ್, ಫೇಸ್‍ಬುಕ್‍ ಮತ್ತು ಟ್ವಿಟರ್‍ನಂತಹ ಕಂಪೆನಿಗಳು ಹಾಸ್ಕೇಲ್‍ ಜ್ಞಾನ ಇರುವವರನ್ನು ಆಯ್ಕೆ ಮಾಡಲಾರಂಭಿಸಿದ್ದಾರೆ. ಇದು ಮುಂಬರುವ ತಂತ್ರಜ್ಞಾನಕ್ಕೆ ಅಡಿಪಾಯ ಹಾಕಿದೆ.

ಸಿಎಮ್‍ಐ ಚೆನ್ನೈನ ವೈಷ್ಣವಿ ಸುಂದರರಾಜನ್ ತರಬೇತಿ ಕಾರ್ಯಾಗಾರವನ್ನು ನಡೆಸಿದರು. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಎಚ್.ಡಿ. ಫಣೀಂದ್ರ, ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ವಿ. ರಘುವೀರ್, ಮಾಸ್ಟರ್ ಆಫ್ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಗಿರೀಶ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‍ನ ಪ್ರೊಫೆಸರ್ ಡಾ.ಸಿ. ವಿದ್ಯಾರಾಜ್, ಸಿಎಸ್ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಎಸ್.ಕುಝಲೈಮೊಝಿ ಮತ್ತು ಸಿಎಸ್ ವಿಭಾಗದ ಆರ್. ಅನಿತಾ ಕಾರ್ಯಾಗಾರದ ಸಂಯೋಜಕರಾಗಿದ್ದರು. ಎನ್‍ಐಇ ಮತ್ತು ಎನ್‍ಐಆರ್‍ಐಟಿಯ 35 ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

Leave a Reply

comments

Related Articles

error: