ಮೈಸೂರು

ಪ್ರಾಢಶಾಲಾ ಶಿಕ್ಷಕರ ಬಡ್ತಿಗೆ ಆಗ್ರಹಿಸಿ ಆ.25ರಂದು ಧರಣಿ ಸತ್ಯಾಗ್ರಹ : ಶಿಕ್ಷಣ ಸಚಿವರಿಗೆ ಮರಿತಿಬ್ಬೇಗೌಡ ಪತ್ರ

ಮೈಸೂರು,ಆ.13:- ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ  ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಕಳೆದ ನಾಲ್ಕು ವರ್ಷಗಳಿಂದ ಬಡ್ತಿ ನೀಡದೆ ಇರುವುದರಿಂದ ಹಲವರಿಗೆ ಅನ್ಯಾಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿದ್ದಾರೆ.

ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಮರಿತಿಬ್ಬೇಗೌಡ ಧಾರವಾಡ ಮತ್ತು ಕಲಬುರ್ಗಿ ವಿಭಾಗಗಳಲ್ಲಿ 1992-94ರ ಸಾಲಿನಲ್ಲಿ ನೇಮಕಗೊಂಡ ಶಿಕ್ಷಕರಿಗೆ ನಾಲ್ಕು ವರ್ಷಗಳ ಹಿಂದೆ ಬಡ್ತಿ ನೀಡಲಾಗಿದೆ. ಅದೇ ಸಾಲಿನಲ್ಲಿ ನೇಮಕಗೊಂಡ ಮೈಸೂರು ವಿಭಾಗದವರಿಗೆ ಇದುವರೆಗೂ ಬಡ್ತಿ ನೀಡದೆ ಇರುವುದಕ್ಕೆ ಶಿಕ್ಷಣ ಇಲಾಖೆಯ ಆಯುಕ್ತರ ಬೇಜವಾಬ್ದಾರಿತನವೇ ಕಾರಣ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಚಾರದಲ್ಲಿ ಸಚಿವರು,ಆಯುಕ್ತರನ್ನು ಹಲವು ಬಾರಿ ಭೇಟಿ ಮಾಡಿ ಪತ್ರ ಬರೆದು ಸಭೆಗಳಲ್ಲಿ ವಿನಂತಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. 2020ರ ಜೂನ್ ಅಂತ್ಯದೊಳಗೆ ಬಡ್ತಿ ನೀಡುವುದಾಗಿ ಆಯುಕ್ತರು ಖಚಿತವಾಗಿ ಭರವಸೆ ನೀಡಿದ್ದರೂ ಅದು ಈಡೇರಿಲ್ಲ, ಸಚಿವರಿಗೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಪರಿಹಾರ ದೊರಕದಿರುವುದರಿಂದ ವಿವಿಧ ಸಂಘಟನೆಗಳ ಜೊತೆಗೂಡಿ ಆ.25ರಂದು ಬೆಳಿಗ್ಗೆ 11ಗಂಟೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ  ಆಯುಕ್ತಾಲಯದ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: