ಮೈಸೂರು

ಕೊರೋನಾ ಸೋಂಕಿತರ ಮನೆಯಲ್ಲಿ ಸೇರಿದ್ದ ಹಾವನ್ನು ರಕ್ಷಿಸಿದ ಸ್ನೇಕ್ ಶ್ಯಾಂ

ಮೈಸೂರು,ಆ.13:- ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರ ಮನೆಯಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು ಉರಗತಜ್ಞ ಸ್ನೇಕ್ ಶ್ಯಾಂ ರಕ್ಷಣೆ ಮಾಡಿದ್ದಾರೆ.

ಜೆ.ಪಿ.ನಗರದ ಡಿ ಬ್ಲಾಕ್ ನಲ್ಲಿರುವ ಮನೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಮಳೆಗಾಲವಾಗಿದ್ದರಿಂದ ಹಾವೊಂದು ಸೇರಿಕೊಂಡಿತ್ತು. ಮನೆಯ ಮಾಲೀಕರು ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ಕರೆ ಮಾಡಿದ್ದರು. ಅವರು ಕೋವಿಡ್ ಆತಂಕವನ್ನು ಲೆಕ್ಕಿಸದೆ ಮನೆಗೆ ಬಂದು ಉರಗವನ್ನು ರಕ್ಷಿಸಿದ್ದಾರೆ. ಸ್ನೇಕ್ ಶ್ಯಾಂ ಪ್ರತಿಕ್ರಿಯಿಸಿ ಮಳೆಗಾಲವಾಗಿರುವುದರಿಂದ ಮನೆಗಳಿಗೆ ಹಾವು ಸೇರುವುದು ಸಾಮಾನ್ಯವಾಗಿದೆ. ಸೀಲ್ ಡೌನ್ ಆಗಿರುವ ನಿವಾಸಿಗಳ ಸುತ್ತಮುತ್ತಲೇ ಕಳೆದ ಕೆಲ ದಿನಗಳಲ್ಲಿ ಹಲವು ಹಾವು ರಕ್ಷಣೆ ಮಾಡಿದ್ದೇನೆ, ಜಿಲ್ಲಾಡಳಿತ ಪಿಪಿಇ ಕಿಟ್ಟ ನೀಡಿದರೆ ಉತ್ತಮ ಎಂದರು.

ಇದೇ ವೇಳೆ ಮನೆಯವರಲ್ಲಿ ಚೆನ್ನಾಗಿ ಸಾಕಿದ್ದೀರಿ ಹಾವನ್ನು ಎಂದು ತಮಾಷೆ ಮಾಡಿದರು. ಅದಕ್ಕೆ ಉತ್ತರಿಸಿದ ಮಾಲೀಕರು ಯಾವತ್ತೂ ಹಾವು ಬಂದಿರಲಿಲ್ಲ, ಇದೇ ಮೊದಲ ಬಾರಿ ಮನೆಗೆ ಬಂದು ಸೇರಿಕೊಂಡಿದೆ ಎಂದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: