ಮೈಸೂರು

ಏ.2: ಜಿಲ್ಲೆಯಲ್ಲಿ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮ : ಡಿ.ರಂದೀಪ್

ಮೈಸೂರು ಜಿಲ್ಲೆಯಲ್ಲಿ ಎಪ್ರಿಲ್ 2 ರಿಂದ ಮೂರು ದಿನಗಳ ಕಾಲ ಮೊದಲ ಹಂತದ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ತಿಳಿಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ  ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ಭಾರತ ಪೊಲಿಯೋ ಮುಕ್ತ ರಾಷ್ಟ್ರಎಂದು ಘೋಷಿಸಲ್ಪಟ್ಟರೂ ಮುನ್ನೆಚ್ಚರಿಕಾ  ಕ್ರಮವಾಗಿ ಪೊಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೋಷಕರು 5 ವರ್ಷದೊಳಗಿನ ಮಕ್ಕಳನ್ನು  ಹತ್ತಿರದ ಲಸಿಕಾ ಕೇಂದ್ರಕ್ಕೆ ತಪ್ಪದೇ ಕರೆದೊಯ್ದು ಲಸಿಕೆ ಹಾಕಿಸಿ. ಲಸಿಕೆಯ ಕುರಿತು ಯಾವುದೇ ಆತಂಕ ಬೇಡ ಎಂದರು.

ಏಪ್ರಿಲ್ 2 ರಂದು ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಒಟ್ಟು 1588 ಬೂತ್‍ಗಳನ್ನು ತೆರೆಯಲಾಗುವುದು. 327 ಮೇಲ್ವಿಚಾರಕರು, 6352 ಲಸಿಕಾ ಕಾರ್ಯಕರ್ತರು, 34 ಟಾನ್ಸೀಟ್ ಟೀಂ, 16 ಸಂಚಾರಿ ತಂಡಗಳು ಕಾರ್ಯನಿರ್ವಹಿಸುವುದರ ಜೊತೆ 6,94,341ಮನೆಗಳಿಗೆ ಭೇಟಿ ನೀಡಲು ಚಿಂತನೆ ನಡೆಸಲಾಗಿದೆ ಎಂದರು.

ಏಪ್ರಿಲ್ 30 ರಿಂದ ಮೇ 3 ರವರೆಗೆ ಎರಡನೇ ಹಂತದ ಪಲ್ಸ್ ಪೊಲಿಯೋ ಕಾರ್ಯಕ್ರಮ ನಡೆಯಲಿದ್ದು, ಎಷ್ಟು ಬಾರಿ ಲಸಿಕೆ ಹಾಕಿಸಿದರೂ ಕೂಡ ತಪ್ಪದೇ ಲಸಿಕೆ ಹಾಕಿಸಿ ಎಂದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: