ಮೈಸೂರು

ವಿಳಾಸ ಕೇಳುವ ನೆಪದಲ್ಲಿ ಕುತ್ತಿಗೆಯಲ್ಲಿದ್ದ ಸರ ಅಪಹರಣ

ಮೈಸೂರು,ಆ.14:- ಮೈಸೂರಿನಲ್ಲಿ ಸರಗಳ್ಳತನ ಮತ್ತೆ ಚಿಗುರಿಕೊಂಡಿದ್ದು ನಗರದಲ್ಲಿ ಕಳ್ಳರು ಮತ್ತೆ ತಮ್ಮ ಕೈಚಳಕ ತೋರುತ್ತಿದ್ದಾರೆ.

ಶ್ರೀರಾಂಪುರ 2ನೇ ಹಂತದ ಒಂದನೇ ಮುಖ್ಯರಸ್ತೆಯ ನಿವಾಸಿಯೋರ್ವರು ಮನೆಯ ಮುಂಭಾಗ ನಿಂತಿದ್ದ ವೇಲೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ. ಶ್ರೀರಾಂಪುರ 2ನೇ ಹಂತದ ಒಂದನೇ ಮುಖ್ಯರಸ್ತೆಯ ನಿವಾಸಿ ನಾಗಲಕ್ಷ್ಮಿ ಎಂಬವರೇ ಚಿನ್ನದ ಸರ ಕಳೆದುಕೊಂಡವರಾಗಿದ್ದಾರೆ.  ಇವರು ನಿನ್ನೆ ಮಧ್ಯಾಹ್ನದ ವೇಳೆ ಮನೆಯ ಹೊರಗಡೆ ನಿಂತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ವಿಳಾಸ ಕೇಲುವ ನೆಪದಲ್ಲಿ ಇವರ ಕುತ್ತಿಗೆಯಲ್ಲಿದ್ದ 1.80ಲಕ್ಷರೂ.ಮೌಲ್ಯದ 40ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಬೈಕಿನಿಂದ ಇಳಿದ ವ್ಯಕ್ತಿ ವಿಳಾಸ ಕೇಳಿದ್ದು ಇವರು ತನಗೆ ಗೊತ್ತಿಲ್ಲ ಎಂದು ಹೇಳುವಷ್ಟರಲ್ಲಿ ಸರ ಕಿತ್ತುಕೊಂಡು ಮತ್ತೋರ್ವ ವ್ಯಕ್ತಿ ನಿಲ್ಲಿಸಿಕೊಂಡಿದ್ದ ಬೈಕ್ ನ್ನು ಏರಿ ಹೊರಟಿದ್ದಾನೆ ಎಂದು ಹೇಳಲಾಗಿದೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೆಪಿ ನಗರದಲ್ಲಿಯೂ ಮನೆಯ ಮುಂದೆ ನಿಂತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಳ್ಳರು ಅಪಹರಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: