ಪ್ರಮುಖ ಸುದ್ದಿ

ಕೋವಿಡ್-19 ; ದೇಶದಲ್ಲಿ ಎರಡನೇ ಬಾರಿಗೆ ಸಾವಿರಕ್ಕೂ ಅಧಿಕ ಮಂದಿ ಸಾವು :  ಯುಎಸ್-ಬ್ರೆಜಿಲ್ ನಂತರ ಮೂರನೇ ಸ್ಥಾನದಲ್ಲಿ  ಭಾರತ

ದೇಶ(ನವದೆಹಲಿ)ಆ.14:- ದೇಶದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಹೆಚ್ಚುತ್ತಿವೆ. ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಕಳೆದ ದಿನದಲ್ಲಿ 1007 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಾವು  ಸಂಭವಿಸುತ್ತಿರುವುದು ಇದು ಎರಡನೇ ಬಾರಿ. ಇದರೊಂದಿಗೆ ದೇಶದಲ್ಲಿ ಈವರೆಗೆ 48 ಸಾವಿರ 40 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ವಿಷಯದಲ್ಲಿ, ಅಮೆರಿಕ ಮತ್ತು ಬ್ರೆಜಿಲ್ ನಂತರ ಭಾರತ ಈಗ ಮೂರನೇ ಸ್ಥಾನದಲ್ಲಿದೆ. ಈವರೆಗೆ ಅಮೆರಿಕದಲ್ಲಿ ಒಂದು ಲಕ್ಷ 70 ಸಾವಿರ 415 ಮಂದಿ ಮತ್ತು ಬ್ರೆಜಿಲ್‌ನಲ್ಲಿ ಒಂದು ಲಕ್ಷ ಐದು ಸಾವಿರದ 564 ಜನರು ಸಾವನ್ನಪ್ಪಿದ್ದಾರೆ.

ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಈವರೆಗೆ 24 ಲಕ್ಷ 61 ಸಾವಿರದ 191 ಕೊರೋನಾ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 17 ಲಕ್ಷ 51 ಸಾವಿರದ 555 ಜನರು ಗುಣಮುಖರಾಗಿದ್ದರೆ, 48 ಸಾವಿರ 40 ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈಗ 6 ಲಕ್ಷ 61 ಸಾವಿರದ 595 ಸಕ್ರಿಯ ಪ್ರಕರಣಗಳಿವೆ. ಕಳೆದ ದಿನ 66 ಸಾವಿರ 553 ಹೊಸ ಪ್ರಕರಣಗಳು ವರದಿಯಾಗಿವೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: