ಮೈಸೂರು

ಪಿಕ್ ಪಾಕೆಟ್ : 32,500ರೂ ಕಳುವು

ಮೈಸೂರು,ಆ.14:-ವ್ಯಕ್ತಿಯೋರ್ವರ ಜೇಬನ್ನು ಪಿಕ್ ಪಾಕೆಟ್ ಮಾಡಿ ಪರ್ಸ್ ಸಮೇತ  32,500ರೂ. ಕಳುವು ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಜನತಾನಗರ ನಿವಾಸಿ ಮಂಜುನಾಥ್ ಎಂಬವರೇ ಹಣಕಳೆದುಕೊಂಡವರಾಗಿದ್ದಾರೆ. ಇವರು ಗುಂಡ್ಲುಪೇಟೆಗೆ ಹೋಗಿದ್ದರು. ವಾಪಸ್ ಬರುವಾಗ ನಗರದ ಗನ್ ಹೌಸ್ ಬಳಿ ಬಸ್ ನಿಂದ ಇಳಿದಿದ್ದು ಜನತಾನಗರಕ್ಕೆ ಹೋಗುವ ಬಸ್ ಹತ್ತುವ ವೇಳೆ ಅವರನ್ನು ತಳ್ಳಿಕೊಂಡು ಮೂವರು ಬಸ್ ಹತ್ತಿದ್ದರು ಎನ್ನಲಾಗಿದೆ. ರಾಮಸ್ವಾಮಿ ವೃತ್ತದ ಬಳಿ ಬಂದು ಜೇಬು ನೋಡಿಕೊಂಡಾಗ ಪರ್ಸ್ ಕಳುವಾಗಿರುವುದು ತಿಳಿದು ಬಂದಿದ್ದು, ನೂಕಿಕೊಂಡು ಬಸ್ ಹತ್ತಿದ್ದ ಮೂವರು ಇಳಿದುಹೋಗಿದ್ದರು. ಈ ಕುರಿತು ಕೆ.ಆರ್.ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: