ಮೈಸೂರು

ವಿದ್ಯಾರ್ಥಿಗಳ ಚಲನವಲನ, ಶಿಸ್ತಿನ ಮೇಲೆ ನಿಗಾಕ್ಕೆ ಇನ್ನು ವಿವಿ ಕ್ಯಾಂಪಸ್ ನಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು

ಮೈಸೂರು,ಆ.14:- ವಿದ್ಯಾರ್ಥಿಗಳ ಚಲನವಲನ, ಶಿಸ್ತು ಸಂಯಮದ ಬಗ್ಗೆ ನಿಗಾ ವಹಿಸುವ ಸಲುವಾಗಿ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿ ಹೆಜ್ಜೆಹೆಜ್ಜೆಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ

ದೇಶದ ಪ್ರಮುಖ ವಿವಿಗಳಲ್ಲಿ ಒಂದಾಗಿರುವ ಮೈಸೂರು ವಿವಿ ತನ್ನದೇ ಆದ ಹೆಗ್ಗಳಿಕೆ, ಗೌರವ ಹೊಂದಿದೆ. ಹೀಗಾಗಿ ದೇಶ ಹಾಗೂ ವಿದೇಶದ ಸಾವಿರಾರು ವಿದ್ಯಾರ್ಥಿಗಳು ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಮಾನಸಗಂಗೋತ್ರಿಯಲ್ಲಿ ನಡೆದ ಕೆಲವು ಘಟನೆಗಳು ವಿಶ್ವವಿದ್ಯಾನಿಲಯದ ಗೌರವಕ್ಕೆ ಧಕ್ಕೆ ಉಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಮೈಸೂರು ವಿವಿ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಶಿಸ್ತು, ಸಂಯಮ, ಚಲನವಲನಗಳ ಮೇಲೆ ನಿಗಾವಹಿಸಲು ತೀರ್ಮಾನಿಸಿದೆ.

ಇದಕ್ಕಾಗಿ ಮಾನಸಗಂಗೋತ್ರಿ ಆವರಣದ ಪ್ರತಿಯೊಂದು ಹೆಜ್ಜೆಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಮಾನಸಗಂಗೋತ್ರಿಗೆ ಬಂದರೆ ಶಿಸ್ತುಸಂಯಮ ಕಾಪಾಡಿ ಎಂಬ ಎಚ್ಚರಿಕೆ ನೀಡಿದೆ. ಮಾನಸಗಂಗೋತ್ರಿ ಆವರಣದ ಪ್ರತಿಯೊಂದು ರಸ್ತೆಯಲ್ಲೂ ಸರ್ವಲೆನ್ಸ್ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇದಕ್ಕಾಗಿ ಒಟ್ಟು 760 ಕ್ಯಾಮರಾಗಳನ್ನು ಬಳಸಲಾಗಿದೆ. ಈ ಎಲ್ಲಾ ಕ್ಯಾಮರಾಗಳಿಗೂ ತಿಂಗಳೊಳಗೆ ಚಾಲನೆ ಸಿಗಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: