ನಮ್ಮೂರುಮೈಸೂರು

ಬದಲಾವಣೆಯ ಸುತ್ತ ಬೆಳಕು ಚೆಲ್ಲಿದ ಐಟಿ ಸಮ್ಮೇಳನ

ಮೈಸೂರಿನಲ್ಲಿ ಸಿಐಐ ಮತ್ತು ಐಟಿ ಬಿಟಿವತಿಯಿಂದ ಕೆಬಿಐಟಿಎಸ್ &ಎಸ್ ಟಿಪಿಐ ಸಹಯೋಗದಲ್ಲಿ ಲರ್ಸನ್ ಮತ್ತು ಟರ್ಬೋ ಲಿಮಿಟೆಡ್ ಸಮ್ಮುಖ  ಐಟಿ ಸಮ್ಮೇಳನ ನಡೆಯಿತು.

ಸಮ್ಮೇಳನದಲ್ಲಿ ಜಗತ್ತಿನ ಬದಲಾವಣೆಗನ್ವಯ ಕಲಿಕೆಯ ಮೇಲೆ ಬೆಳಕು ಚೆಲ್ಲಲಾಯಿತು. ಆಧುನಿಕತೆ ಮುಂದುವರಿದಂತೆ ತಿಳುವಳಿಕೆಯ ಗುಣಮಟ್ಟ ವೇಗಪಡೆಯಬೇಕಿದ್ದು, ಬೇಡಿಕೆಗಳ ಬದಲಾವಣೆಗನ್ವಯ ಅದನ್ನು ಎದುರಿಸುವ ಸಾಮರ್ಥ್ಯದ ಕುರಿತು ತಿಳಿಸಲಾಯಿತು.

ಸುಷ್ಮಾ ರಾಜಗೋಪಾಲನ್ ಮಾತನಾಡಿ ಭವಿಷ್ಯದಲ್ಲಿ ಬೇಡಿಕೆಗಳಲ್ಲಿ ಬದಲಾವಣೆಯನ್ನು ನಮ್ಮದಾಗಿಸಿಕೊಳ್ಳಬೇಕು. ಸಮ್ಮ ಸುತ್ತಲೂ ಎಲ್ಲವೂ ಬದಲಾವಣೆಯಾಗುತ್ತಲೇ ಇದೆ. ಎಲ್ಲವೂ ಡಿಜಿಟಲ್ ಆಗುತ್ತಿದೆ ಎಂದರು.

ಎಲ್ಲ ಸಂಸ್ಥೆಗಳು ಉದ್ಯೋಗಿಗಳಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ತರಬೇತಿಯನ್ನು ನೀಡಿ ಅವರ ಆಯ್ಕೆಗೇ ಬಿಟ್ಟುಬಿಡಬೇಕು. ಆಗ ಮಾತ್ರ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯ ಎಂದು ತಿಳಿಸಿದರು.

ಸಿಐಐ ಅಧ್ಯಕ್ಷ ಡಾ.ಎನ್.ಮುತುಕುಮಾರ್ ಮಾತನಾಡಿ, ಐಟಿ ನೆರವಿನಿಂದ ನಾವೀಗಾಗಲೇ ಬೆಳವಣಿಗೆ ಕಂಡಿದ್ದೇವೆ. ತಂತ್ರಜ್ಞಾನವನ್ನು ಬಳಸುವ ಬಗ್ಗೆಯೂ ತಿಳಿದಿರಬೇಕು ಎಂದರು.

ಡಿಸ್ಕ್ರಪ್ಟಿಂಗ್ ಟ್ರೆಡಿಶನ್ & ರೆಡಿಫೈನಿಂಗ್ ಬಿಸಿನೆಸ್ ಮಾಡೆಲ್ಸ್ , ಡಿಜಿಟಲ್ ಮೆನ್ಯುಫೆಕ್ಚರಿಂಗ್ ಗೇಮ್ ಕುರಿತಂತೆ ಇನ್ನು ಹಲವಾರು ವಿಷಯಗಳ ಕುರಿತು ಈ ಸಂದರ್ಭ ಪ್ರಶ್ನೋತ್ತರ ನಡೆಸಲಾಯಿತು. ಮೈಸೂರು ಸುತ್ತಮುತ್ತಲಿನ ಸುಮಾರು 150 ಮಂದಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: