ಮೈಸೂರು

ಕೊರೋನಾ ಸೋಂಕಿತರ ಮನೆಗೆ ತೆರಳಿ ಆಯುಷ್ ಕಿಟ್ ವಿತರಿಸಿದ ರಾಮದಾಸ್ : ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ತರಾಟೆ

ಮೈಸೂರು,ಆ.14:- ಕೆ.ಆರ್.ಕ್ಷೇತ್ರವನ್ನು ಕೊರೋನಾ ಮುಕ್ತವಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶಾಸಕ ಎಸ್.ಎ.ರಾಮದಾಸ್ ಇಂದು  ಸೋಂಕಿತರ ಮನೆಗೆ ತೆರಳಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ  ಆಯುಷ್ ಕಿಟ್ ವಿತರಣೆ  ಮಾಡಿದರು.

ಗುಂಡೂರಾವ್ ನಗರ ಭಾಗದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯ ಮನೆಗೆ ತೆರಳಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚ್ಯವನ್ ಪ್ರಾಶ್,ನಿಂಬೆಹಣ್ಣು,ಶುಂಠಿ , ಅಗತ್ಯ ವಸ್ತುಗಳನ್ನು ವಿತರಿಸಿದರು. ಕೊರೋನಾ ಸೋಂಕಿತರ ಕುಟುಂಬಕ್ಕೆ ಅಭಯ ನೀಡಿದ ಅವರು ಕೊರೋನಾಗೆ ಜನರು ಹೆದರುವ ಅವಶ್ಯಕತೆಯಿಲ್ಲ. ನಿಮ್ಮ ನಿಮ್ಮ ಮನೆಗಳಲ್ಲೇ ಆರೋಗ್ಯ ನೋಡಿಕೊಳ್ಳಿ. ಅನವಶ್ಯಕವಾಗಿ ತಿರುಗಾಡಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.

ಆಯುಷ್ ಕಿಟ್ ವಿತರಣೆ ಜೊತೆಗೆ,ಗುಂಡುರಾವ್ ನಗರದ  ನಿವಾಸಿಗಳ ಕಷ್ಟ ಆಲಿಸಿದರು. ಇದೇ ವೇಳೆ ಶಾಸಕರ ಬಳಿ ಸ್ಥಳೀಯರು ತಮ್ಮ ಮನೆಯ ಬಳಿ ಕಸ ತೆಗೆಯಲು ವಾಹನ ಬರುತ್ತಿಲ್ಲವೆಂದು ದೂರಿದರು.  ಈ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಆದಷ್ಟು ಬೇಗ ಸಮಸ್ಯೆ ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: