ಮೈಸೂರು

ಆ.16 : ಮಯುಖ ಆಯುರ್ವೇದಿಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಉದ್ಘಾಟನೆ

ಮೈಸೂರು,ಆ.14:- ಮಯುಖ ಆಯುರ್ವೇದಿಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಆ.16ರಂದು  ಮೈಸೂರಿನಲ್ಲಿ #112,8 ನೇ  ಮುಖ್ಯರಸ್ತೆ , 2ನೇ ಬ್ಲಾಕ್, ಬಿ.ಎಂ.ಆಸ್ಪತ್ರೆಯ ಪಕ್ಕ ಜಯಲಕ್ಷ್ಮಿಪುರಂ ನಲ್ಲಿ ಉದ್ಘಾಟನೆಗೊಳ್ಳಲಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಿರ್ದೇಶಕ ನಾಗೇಶ್ ಎಂ.ಎಲ್ ಉದ್ಘಾಟನೆಯನ್ನು ಶಾಸಕ ಎಸ್.ಎ.ರಾಮದಾಸ್ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ನಗರಪಾಲಿಕೆ ಸದಸ್ಯೆ ಭಾಗ್ಯ ಮಹದೇಶ್ ಪಾಲ್ಗೊಳ್ಳಲಿದ್ದಾರೆ ಎಂದರು. ನಮ್ಮಲ್ಲಿ ಆಯುರ್ವೇದಿಕ್ ಚಿಕಿತ್ಸೆ, ಥೆರಪಿಯನ್ನು ಸುಪ್ರಸಿದ್ಧ ಆಯುರ್ವೇದಿಕ್ ವೈದ್ಯರಿಂದ ನೀಡಲಾಗುವುದು. ನುರಿತ ವೈದ್ಯರಿಂದ ಮಾನಸಿಕ ಚಿಕಿತ್ಸೆ ಮತ್ತು ಯೋಗ ಥೆರಪಿ , ಆಲರ್ಜಿಯ ತೊಂದರೆಗಳು, ರೋಗನಿರೋಧಕ ಶಕ್ತಿ, ಮಕ್ಕಳ ಆರೋಗ್ಯದ ಅಭಿವೃದ್ಧಿಯನ್ನು ನೀಡಲಾಗುವುದು ಎಂದರು.

ಇಲ್ಲಿನ ಔಷಧಿ ಹಾಗೂ ಇನ್ನಿತರೆ ಚಿಕಿತ್ಸೆಯನ್ನು ಯಾವುದೇ ರೀತಿಯ ಅಪಾಯಕಾರಿ ರಾಸಾಯನಿಕ ವಸ್ತುಗಳಿಂದ ಮಿಶ್ರಣ ಮಾಡದೆ ನೈಸರ್ಗಿಕವಾಗಿ ತಯಾರಿಸಿದ ಸೌಂದರ್ಯವರ್ಧಕಗಳನ್ನು ಉಪಯೋಗಿಸಿ ಚಿಕಿತ್ಸೆಯನ್ನು ನೀಡಲಾಗುವುದು. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಆಯುರ್ವೇದಿಕ್ ಕಿಡ್ಸ್ ಸ್ಪಾ ಎಂಬ ಚಿಕಿತ್ಸೆಯನ್ನು ಮಕ್ಕಳ ಸರ್ವತೋಮುಖ, ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯ ಮೇಲೆ ಅಭಿವೃದ್ಧಿಪಡಿಸಿ ಚಿಕಿತ್ಸೆಯನ್ನು ನೀಡಲಾಗುವುದು ಎಂದು ತಿಳಿಸಿದರು.

ಮೈಸೂರಿನಲ್ಲಿ ಕೋವಿಡ್-19 ಸೋಂಕಿತರು ಹೆಚ್ಚಾಗುತ್ತಿದ್ದು ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಹೆಚ್ಚಿನ ಗಮನ ಹರಿಸಬೇಕಿದೆ. ನಮ್ಮ ಮಯೂಖ ಆಯುರ್ವೇದ ಚಿಕಿತ್ಸಾಲಯವು ರೋಗ ನಿರೋಧಕ ಶಕ್ತಿಯನ್ನು ಮನುಷ್ಯನ ಶರೀರದ ಮೇಲೆ ಪರಿಣಾಮಕಾರಿಯಾದ ಔಷಧಿ ಹಾಗೂ ಅವನ ಜೀವನ ಶೈಲಿಯಲ್ಲಿ ಆರೋಗ್ಯವಾಗಿರಲು ಅನುಸರಿಸಬೇಕಾದ ಕ್ರಮ ಹಾಗೂ ಅವನ ಆಹಾರ ಪದ್ಧತಿ, ಯೋಗ ಇನ್ನಿತರೆ ಮುಂತಾದ ಚಿಕಿತ್ಸೆಯ ಬಗ್ಗೆ ಸಲಹೆ ಮತ್ತು ಚಿಕಿತ್ಸೆ ನೀಡಲಾಗುವುದು. ಇದರ ಸದುಪಯೋಗಪಡಿಸಿಕೊಳ್ಳಿ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: