ಮೈಸೂರು

ಜಲ ಸಂರಕ್ಷಣೆಯ ಕುರಿತು ಅರಿವು ಜಾಥಾಕ್ಕೆ ಚಾಲನೆ

ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಎದುರು ಶನಿವಾರ ಜಲ ಸಂರಕ್ಷಣೆಯ ಕುರಿತು ಅರಿವು ಜಾಥಾಕ್ಕೆ ಚಾಲನೆ ನೀಡಲಾಯಿತು.

ಇಲ್ಲಿನ ಬೃಂದಾವನ ಬಡಾವಣೆಯ ಮಹಾವೀರ ಎಜ್ಯುಕೇಷನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಡಾ.ಎಂ.ದೇಜಮ್ಮ ಮಹಾವೀರ ವಿದ್ಯಾಸಂಸ್ಥೆ ವತಿಯಿಂದ ಜಲಸಂರಕ್ಷಣೆ ಕುರಿತು ಅರಿವು ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಟ್ರಸ್ಟ್ ನ ಕಾರ್ಯದರ್ಶಿ ರೂಪ ಹುನಗುಂದ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನೀರು ಅತ್ಯಂತ ಅಮೂಲ್ಯವಾದ ಜೀವಜಲವಾಗಿದ್ದು, ಅದನ್ನು ಉಳಿಸಿಕೊಂಡು ಹೋಗಬೇಕು. ಇಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರವುಂಟಾಗಿದೆ. ಒಂದು ಹನಿ ನೀರು ಅತ್ಯಮೂಲ್ಯ. ಅದರಿಂದ ನೀರನ್ನು ಹಿತಮಿತವಾಗಿ ಕಾಯ್ದುಕೊಳ್ಳಬೇಕು. ವೃಥಾ ಹಾಳು ಮಾಡಬಾರದು ಎಂದರು.

ಈ ಸಂದರ್ಭ ಸಲಹಾ ಸಮಿತಿ ಸದಸ್ಯ ಸಂಜಯ್ ಹುನಗುಂದ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್.ಆರ್.ಬಸಪ್ಪ ಮತ್ತಿತರರು ಉಪಸ್ಥಿತರಿದ್ದರು. ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೀರಿನ ಕುರಿತು ಜಾಗೃತಿ ಮೂಡಿಸಿದರು. ಮರಗಳೇ ಪೃಥ್ವಿಯ ಜಲದ ಮೂಲ, ಮರಗಳನ್ನು ಉಳಿಸಿ ಶುದ್ಧ ಜಲದ ಮರುಹುಟ್ಟಿಗೆ ನಾಂದಿ ಹಾಡಿ, ಜಲವೇ ಸಕಲ ಜೀವರಾಶಿಗಳಿಗೆ ಚೈತನ್ಯದಾಯಕ, ಅಮೃತಧಾರೆಯನ್ನು ಉಳಿಸಿ ಸಕಲ ಜೀವಿಗಳನ್ನು ರಕ್ಷಿಸಿ,ಅರಿತು ಬಾಳಿದರೆ ಜೀವನ, ಮಿತವಾಗಿ ನೀರನ್ನು ಬಳಸದಿದ್ದರೆ ಆಗುವುದು ಮನುಕುಲದ ಮರಣ ಮುಂದೊಂದು ದಿನ ಎಂಬಿತ್ಯಾದಿ ಬರಹಗಳಿಂದ ಕೂಡಿದ ನಾಮಫಲಕಗಳು ವಿದ್ಯಾರ್ಥಿಗಳ ಕೈಯ್ಯಲ್ಲಿ ರಾರಾಜಿಸಿದವು.   (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: