ಪ್ರಮುಖ ಸುದ್ದಿಮೈಸೂರು

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಿ,ಯಾವುದೇ ಕಾರಣಕ್ಕೂ ಸೇವೆಯಿಂದ ಕೈಬಿಡಬಾರದೆಂದು ಮನವಿ

ಮೈಸೂರು,ಆ.15:- ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಿ ಮತ್ತು ಯಾವುದೇ ಕಾರಣಕ್ಕೂ ಸೇವೆಯಿಂದ ಕೈಬಿಡಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರಿಗೆ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಮೈಸೂರು ಜಿಲ್ಲೆ  ವತಿಯಿಂದ ಮನವಿ ಸಲ್ಲಿಸಲಾಯಿತು.

ಸಂಯೋಜಲಿ ಎಂ ಉಮಾದೇವಿ ಅವರು ಮನವಿ ಪತ್ರ ಸಲ್ಲಿಸಿ ದೇಶದ ಆಸ್ತಿಯಾಗಿರುವ ವಿದ್ಯಾರ್ಥಿಗಳಿಗೆ ಬೋಧಿಸುವ ಶಿಕ್ಷಕರು, ಉಪನ್ಯಾಸಕರು ಇಂತಹ ಅಸಹಾಯಕ ಪರಿಸ್ಥಿತಿಗೆ ಗುರಿಯಾಗಿರುವುದರ ಬಗ್ಗೆ ಸರ್ಕಾರವು ಕಾಳಜಿಯಿಂದ ನೋಡಬೇಕು. ಈ ಕೂಡಲೇ ಸರ್ಕಾರವು  ಸೇವಾ ಭದ್ರತೆ ಒದಗಿಸಬೇಕು. ಬಾಕಿ ಇರುವ ವೇತನವನ್ನು ಒಂದೇ ಬಾರಿಗೆ ಕೂಡಲೇ ಪಾವತಿಸಬೇಕು. ಸೇವಾ ಭದ್ರತೆ ಒದಗಿಸಿ ಯಾವುದೇ ಕಾರಣಕ್ಕೂ ಕೈಬಿಡಬೇಡಿ. ಬಾಕಿ ಇರುವ ವೇತನವನ್ನು ಬಿಡುಗಡೆಗೊಳಿಸಿ, ರಜಾ ಅವಧಿಯನ್ನು ಕೆಲಸದ ಅವಧಿಯೆಂದು ಪರಿಗಣಿಸುವಂತೆ ಒತ್ತಾಯಿಸಿದರು.  (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: