ಮೈಸೂರು

ಮಾಧ್ಯಮಗಳು ಅಪರಾಧವನ್ನು ವೈಭವೀಕರಿಸದಿರಿ : ಡಾ.ದೊಡ್ಡರಂಗೇಗೌಡ ಸಲಹೆ

ಮಾಧ್ಯಮಗಳು ಮೂಢನಂಬಿಕೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ದೇಶವನ್ನು ನೂರು ವರ್ಷ ಹಿಂದಕ್ಕೆ ಕೊಂಡೊಯ್ಯುತ್ತಿವೆ ಎಂದು ಕವಿ.ಡಾ.ದೊಡ್ಡರಂಗೇಗೌಡ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಸುಗಮ ಸಂಗೀತ ಅಕಾಡಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಎಸ್.ಜಿ.ರಘುರಾಂ ಸಂಸ್ಮರಣೆ ವಿಶೇಷ ಕವಿ-ಕಾವ್ಯ-ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಾಧ್ಯಮಗಳು ಅಪರಾಧವನ್ನು ವೈಭವೀಕರಿಸಿ ಕಿತ್ತಾಟಗಳನ್ನು ದೊಡ್ಡದು ಮಾಡಬಾರದು ಎಂದು ಸಲಹೆ ನೀಡಿದರು. ಸರ್ಕಾರ ರಘುರಾಂ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸುವುದರ ಜೊತೆ, ಸಂಸ್ಥೆಯೊಂದನ್ನುಅವರ ಹೆಸರಿನಲ್ಲಿ ಸ್ಥಾಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಬಾಬಾ ಪರಮಾಣು ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ ಮುಳಿಯ ರಾಘವಯ್ಯ ಅವರನ್ನು ಸನ್ಮಾನಿಸಲಾಯಿತು.

ಕವಿ-ಕಾವ್ಯ-ಗಾಯನ ಕಾರ್ಯಕ್ರಮದಲ್ಲಿ ಗಾಯಕಿಯರು ಗಾಯನ ಪ್ರಸ್ತುತ ಪಡಿಸಿದರು. (ಎಸ್.ಎಚ್)

Leave a Reply

comments

Related Articles

error: