ಮೈಸೂರು

 74 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ರಕ್ತದಾನ ಶಿಬಿರಕ್ಕೆ ಚಾಲನೆ

ಮೈಸೂರು.ಆ.15:-  74 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಹಾಗೂ ಜೀವಧಾರ ರಕ್ತ ನಿಧಿ ಅವರ  ಸಹಯೋಗದೊಂದಿಗೆ ಕಲ್ಯಾಣಗಿರಿ ರಾಜಕುಮಾರ ರಸ್ತೆಯಲ್ಲಿರುವ ತ್ರಿವೇಣಿ ವೃತ್ತದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ಈ ರಕ್ತದಾನ ಶಿಬಿರದಲ್ಲಿ 40 ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.  ಆ ನಂತರ ರಾಯಣ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್ ಜಿ ಗಿರಿಧರ್  ರಾಯಣ್ಣನ ದೇಶಪ್ರೇಮ ಯುವಜನರಿಗೆ ಪ್ರೇರಣೆಯಾಗಲಿ. ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಆದರ್ಶ, ತತ್ವ, ಸಂದೇಶಗಳು ಇಂದಿನ ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಬೇಕು. ಬ್ರಿಟೀಷರ ಕುಟಿಲ ನೀತಿಯ ವಿರುದ್ಧ ಯುವ ಸೇನೆ ಕಟ್ಟಿ ಹೋರಾಡಿ, ಪ್ರಾಣವನ್ನೇ ಬಲಿಕೊಟ್ಟ ರಾಯಣ್ಣನ ಜನ್ಮದಿನ ಆಚರಿಸುವುದು ಅವಶ್ಯಕ. ತ್ಯಾಗ, ಬಲಿದಾನಕ್ಕೆ ಮತ್ತೊಂದು ಹೆಸರೇ ರಾಯಣ್ಣ. ಇಂತಹ ಮಹನೀಯರ ಬಗ್ಗೆ ಯುವ ಜನಾಂಗ ಅರಿತು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಗೊಳ್ಳಿ ರಾಯಣ್ಣ ಸಮುದಾಯದ ಎಲ್ಲ ವರ್ಗಗಳ ಜನರನ್ನು ಒಟ್ಟುಗೂಡಿಸಿ, ಯುವಸೈನ್ಯ ಕಟ್ಟಿ ಬ್ರಿಟೀಷರ ವಿರುದ್ಧ ರಣ ಕಹಳೆಯನ್ನೂದಿದ ವೀರಯೋಧ. ಕಿತ್ತೂರು ರಾಣಿ ಚೆನ್ನಮ್ಮನ ಪರಮ ಬಂಟನಾಗಿ, ಪರಕೀಯರ ವಿರುದ್ಧ ಹೋರಾಡಿದವರು’ ವಿದ್ಯಾರ್ಥಿಗಳು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು. ದೇಶದ ಶಕ್ತಿಯಾದ ವಿದ್ಯಾರ್ಥಿಗಳು ದೇಶಸೇವೆ ಮಾಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಬಿಜೆಪಿ ಎನ್ಆರ್ ಯುವಮೋರ್ಚಾ ಅಧ್ಯಕ್ಷ ಲೋಹಿತ್  ಮಾತನಾಡಿ ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ತಿವಾರಿ ಚಂದ್ರಶೇಖರ್ ಆಜಾದ್ ಆಗಿ ಪರಿವರ್ತನೆಯಾದ ಹಿನ್ನೆಲೆ ಹಾಗೂ ಘಟನೆ ಕುರಿತು ವಿವರಿಸಿದರು. ‌‌ ‘ಸೈನಿಕರ ನಿಸ್ವಾರ್ಥ ಸೇವೆ ಈ ದೇಶದ ಹಿರಿಮೆ. ಸೈನಿಕರ ತ್ಯಾಗ ಮತ್ತು ಬಲಿದಾನದಿಂದ ನೆಮ್ಮದಿ ಬದುಕು ನಡೆಸಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಮೈಸೂರು ನಗರ ಪಾಲಿಕೆ ಸದಸ್ಯರಾದ ಸಾತ್ವಿಕ್ ಸಂದೇಶ್ ಸ್ವಾಮಿ, ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್ ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷರಾದ ಕಿರಣ್ ಗೌಡ ರಾಜ್ಯ ಪರಿಷತ್ ಸದಸ್ಯರಾದ ಆನಂದ್ ಮೈಸೂರು ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕಾ, ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ಮೈಸೂರು ನಗರ ಯುವಮೋರ್ಚಾ ಉಪಾಧ್ಯಕ್ಷರಾದ ಕಾರ್ತಿಕ್ ಕುಮಾರ್ ಕ್ಷೇತ್ರದ ಯುವ ಮೋರ್ಚಾ ಪ್ರಧಾನಕಾರ್ಯದರ್ಶಿ ನವೀನ್ ಶೆಟ್ಟಿ , ಉಪಾಧ್ಯಕ್ಷರಾದ ಧನರಾಜ್ ಮುಖಂಡರಾದ ಜೀವನ್ ಸ್ವಾಮಿ,ರಾಜೇಶ್,ಚೇತನ್, ಶಾಮ್,ಸ್ವರೂಪ್ ಗೌಡ,ಮುಂತಾದವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: