ಮೈಸೂರು

ಫಾರ್ಮಸಿ ಕೋರ್ಸ್‍ಗಳಿಗೆ ಗ್ರೇಡ್ ಮತ್ತು ಸೆಮಿಸ್ಟಾರ್ ಅಳವಡಿಕೆಗೆ ಸಿದ್ಧತೆ : ಡಾ.ಕೆ.ಎಸ್.ರವೀಂದ್ರ

ಫಾರ್ಮಸಿ ಕೋರ್ಸ್‍ಗಳಿಗೆ ಸೆಮಿಸ್ಟರ್ ಹಾಗೂ ಗ್ರೇಡಿಂಗ್ ಪದ್ಧತಿಯನ್ನು ಅಳವಡಿಸಲು ಸಿದ್ಧತೆ ನಡೆದಿದ್ದು 2017-18ನೇ ಸಾಲಿನಿಂದ ಜಾರಿಗೊಳಿಸಲು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ನಿರ್ಣಯಿಸಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್ ತಿಳಿಸಿದರು.

ಮೈಸೂರಿನ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಪದವಿ ದಿನಾಚರಣೆಯಲ್ಲಿ ಮಾತನಾಡಿ ಕ್ಷೇತ್ರದಲ್ಲಿ ಉತ್ತಮ ಪ್ರಯೋಗಗಳು ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಪೂರಕ ಪದ್ಧತಿಗಳ ಅಳವಡಿಕೆಗೆ ನೂತನ ಪಠ್ಯಕ್ರವನ್ನು ಅನುಷ್ಠಾನಗೊಳಿಸಲಿದೆ. ಪ್ರಸ್ತುತ ಪಿಸಿಐ ಮತ್ತು ಅಖಿಲಭಾರತ ತಾಂತ್ರಿಕ ಶಿಕ್ಷಣ ಮಂಡಳಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಫಾರ್ಮಸಿ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಹಲವಾರು ಕಾಯಿಲೆಗಳಿಗೊಳಪಟ್ಟವರು ವಿವಿಧ ಔಷಧಗಳನ್ನು ಸೇವಿಸಬೇಕಾಗುವುದು, ಅವುಗಳ ಅಡ್ಡ ಪರಿಣಾಮಗಳ ಕುರಿತು ರೋಗಿಗೆ ತಿಳುವಳಿಕೆ ನೀಡಬೇಕು. ಅಲ್ಲದೇ ಡಾಕ್ಟರ್ ಮತ್ತು ರೋಗಿಗಳ ನಡುವಿನ ಸೇತುವೆಯಾಗಿ ಫಾರ್ಮಸಿಸ್ಟ್ ಗಳು ಕಾರ್ಯ ನಿರ್ವಹಿಸುತ್ತಿರುವರು ಎಂದರು.

ಔಷಧ ಕ್ಷೇತ್ರ ವಿಶ್ವದ ನಾಲ್ಕನೆ ದೊಡ್ಡ ಉತ್ಪಾದನಾ ಕ್ಷೇತ್ರವಾಗಿದ್ದು ವಾರ್ಷಿಕವಾಗಿ ಒಂದು ಲಕ್ಷ ಕೋಟಿ ಔಷಧಗಳನ್ನು ಉತ್ಪಾದಿಸಲಾಗುತ್ತಿದ್ದು, ಶೇ.40ರಷ್ಟು ರಫ್ತು ವಹಿವಾಟು ನಡೆಸುತ್ತಿದೆ. ಫಾರ್ಮಸಿ ಕೋರ್ಸ್ ಮುಗಿಸಿದವರಿಗೆ ಔಷಧ ಉತ್ಪಾದನೆ, ಮಾರುಕಟ್ಟೆ, ಸಂಶೋಧನೆ ಕ್ಷೇತ್ರಗಳಲ್ಲಿ ವಿಫುಲವಾದ ಅವಕಾಶಗಳಿವೆ ಈ ನಿಟ್ಟಿನಲ್ಲಿ ಹಲವಾರು ಕಾಲೇಜುಗಳ ಆರಂಭಕ್ಕೆ ಅನುಮತಿಗೆ ಅರ್ಜಿಗಳು ಬಂದಿವೆ ಎಂದರು.

ಸಮಾರಂಭದಲ್ಲಿ ಶಾರದಾವಿಲಾಸ  ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರ್ಥಸಾರಥಿ ಅಧ್ಯಕ್ಷತೆ ವಹಿಸಿದ್ದರು, ಗೌರವ ಕಾರ್ಯದರ್ಶಿ ಎಚ್.ಕೆ.ಶ್ರೀನಾಥ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಜಿ.ಆರ್.ಚಂದ್ರಶೇಖರ್, ಕಾಲೇಜಿನ ಪ್ರಾಂಶುಪಾಲ ಹನುಮಂತಾಚಾರ್ ಜೋಶಿ ಉಪಸ್ಥಿತರಿದ್ದರು. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: