ಮೈಸೂರು

 ದ್ವಿಚಕ್ರ ವಾಹನ ಕಳ್ಳರ ಬಂಧನ : 5 ಲಕ್ಷ ರೂ. ಮೌಲ್ಯದ 8 ದ್ವಿಚಕ್ರ ವಾಹನ ವಶ

ಮೈಸೂರು,ಆ.16:-  ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಮೈಸೂರು ನಗರದ ಸಿಸಿಬಿ ಪೊಲೀಸರು, 5 ಲಕ್ಷ ರೂ. ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಮೈಸೂರಿನ ಅಲೀಂನಗರದ ನಿವಾಸಿ ಸುಹೇಲ್‍ ಪಾಷ(18) ಹಾಗೂ ಛಾಯಾದೇವಿ ನಗರದ ಶೋಯೆಬ್‍ ಖಾನ್‍(19) ಎಂದು ಗುರುತಿಸಲಾಗಿದೆ.  ಆ.14ರಂದು ಸಂಜೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಎನ್‍.ಆರ್. ಮೊಹಲ್ಲಾದ ತಿಬ್ಬಾದೇವಿ ಚಿತ್ರಮಂದಿರದ ಬಳಿ ಇಬ್ಬರನ್ನು ಬಂಧಿಸಿದ್ದಾರೆ. ನಂತರ ಇಬ್ಬರನ್ನು ವಿಚಾರಣೆ ನಡೆಸಿದ ವೇಳೆ, ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನೊಂದಿಗೆ ಸೇರಿ, ನಗರದ ವಿವಿಧ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 8 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇವರುಗಳ ಬಂಧನದಿಂದ ವಿಜಯನಗರ ಠಾಣಾ ವ್ಯಾಪ್ತಿಯ 3, ಸರಸ್ವತಿಪುರಂ ಠಾಣಾ ವ್ಯಾಪ್ತಿಯ 2 ಹಾಗೂ ಹೆಬ್ಬಾಳು ಠಾಣಾ ವ್ಯಾಪ್ತಿಯ 3 ಪ್ರಕರಣಗಳು ಪತ್ತೆಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: