ಪ್ರಮುಖ ಸುದ್ದಿ

ಬೇಟೆಗೆ ಹೋದವನು ಗುಂಡೇಟಿಗೆ ಬಲಿಯಾದ

ರಾಜ್ಯ( ಮಡಿಕೇರಿ) ಆ.17 :- ಕಾಫಿ ತೋಟವೊಂದರಲ್ಲಿ ಆಕಸ್ಮಿಕ ಗುಂಡೇಟಿಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಡಿಕೇರಿ ಸಮೀಪದ ಮಕ್ಕಂದೂರಿನ ಉದಯಗಿರಿಯಲ್ಲಿ ನಡೆದಿದೆ.
ಕರ್ಣಂಗೇರಿ ಗ್ರಾಮದ ಚಂದ್ರಗಿರಿಯ ನಿವಾಸಿ, ಮಡಿಕೇರಿ ತಾಲ್ಲೂಕು ಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಕೆ.ಕೆ.ಶಿವ ಬೋಪಣ್ಣ(37) ಎಂಬುವವರೆ ಸಾವನ್ನಪ್ಪಿರುವ ದುರ್ದೈವಿ.
ಶುಕ್ರವಾರ ರಾತ್ರಿ ಮಕ್ಕಂದೂರಿನ ಉದಯಗಿರಿ ಎಂಬಲ್ಲಿ ಬೇಟೆಗೆ ತೆರಳಿದ್ದ ಸಂದರ್ಭ ಮಡಿಕೇರಿಯ ರಾಜೇಶ್ವರಿ ನಗರದ ದೇವಯ್ಯ ಎಂಬಾತ ಸಿಡಿಸಿದ ಗುಂಡಿಗೆ ಆಕಸ್ಮಿಕವಾಗಿ ಸಿಲುಕಿ ಶಿವ ಬೋಪಣ್ಣ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಇವರೊಂದಿಗಿದ್ದ ಚಂದ್ರಗಿರಿಯ ನಿವಾಸಿ ಶರಣ್ ಎಂಬವರು ಗಾಯಗೊಂಡು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದುರ್ಘಟನೆಗೆ ಸಂಬಂಧಿಸಿದಂತೆ ಆರೋಪಿ ದೇವಯ್ಯ ಪೊಲೀಸರಿಗೆ ಶರಣಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.(ಕೆಸಿಐ,ಎಸ್.ಎಚ್)

Leave a Reply

comments

Related Articles

error: