ಮೈಸೂರು

ರೋಗನಿರೋಧಕ ಶಕ್ತಿ ವರ್ಧಿಸುವ ಜೌಷಧಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ನೀಡುವಂತೆ ಸುಧಾಕರ ಎಸ್  ಶೆಟ್ಟಿ ಒತ್ತಾಯ

ಮೈಸೂರು,ಆ.17:-  ಕೋವಿಡ್ -19 ಪರೀಕ್ಷೆ,  ಚಿಕಿತ್ಸೆ ಹಾಗೂ ಅದಕ್ಕೆ ಪೂರಕವಾಗಿ ನೀಡುತ್ತಿರುವ ರೋಗನಿರೋಧಕ ಶಕ್ತಿ ವರ್ಧಿಸುವ ಜೌಷಧಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ನೀಡುವಂತೆ  ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಒಕ್ಕೂಟ ಸುಧಾಕರ ಎಸ್  ಶೆಟ್ಟಿ ಒತ್ತಾಯಿಸಿದ್ದಾರೆ.

ಈ ಕುರಿತು ಸಿಎಂ ಬಿ.,ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು ದೇಶದಲ್ಲಿ  ಕೊರೋನಾ ವೈರಸ್ ಎಂಬ ಹೆಮ್ಮಾರಿ ದಿನದಿನವೂ ವ್ಯಾಪಿಸುತ್ತಿದೆ. ಸೋಂಕು ಮತ್ತು ಸಾವಿನ ಪ್ರಮಾಣವೂ ಏರುಗತಿಯಲ್ಲಿ ಸಾಗಿದೆ. ಪ್ರಸ್ತುತ ದೇಶದಲ್ಲಿ ಪ್ರತಿದಿನವು 60,000 ರಿಂದ 80,000 ಜನರಿಗೆ ಕೊರೋನಾ ಸೋಂಕು ದೃಢಪಡುತ್ತಿದೆ. ಹಾಗೆಯೇ ಪ್ರತಿ ದಿನ  ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹೆಮ್ಮಾರಿ ಜನರ ಜೀವನವನ್ನು ದಯನೀಯ ಸ್ಥಿತಿಗೆ ತಳ್ಳಿದೆ. ದಿನಗೂಲಿ ಆಧಾರದಲ್ಲಿ ಜೀವನ ನಡೆಸುತ್ತಿರುವ, ಸಣ್ಣಪುಟ್ಟ ವೃತ್ತಿಯನ್ನು ನೆಚ್ಚಿಕೊಂಡಿರುವ ದುರ್ಬಲ ವರ್ಗದ ಜನರು ಮತ್ತು ಕೆಳ ಮಧ್ಯಮ ವರ್ಗದ ಜನರು ದುಸ್ಥಿತಿಯಲ್ಲಿದ್ದಾರೆ. ಸರ್ಕಾರವು ಕೋವಿಡ್ -19 ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಜತೆಗೆ ಜನರ ರೋಗ ನಿರೋಧಕ ಶಕ್ತಿಯನ್ನು  ಹೆಚ್ಚಿಸಲು ಮುತುವರ್ಜಿ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧೀಯ ಉತ್ಪನ್ನಗಳನ್ನು ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ  ಉಚಿತವಾಗಿ ತಲುಪಿಸುವುದು ಅಗತ್ಯವಿರುತ್ತದೆ. ಕೊರೋನಾ ಪೀಡಿತರಿಗೆ ಉಚಿತ ಚಿಕಿತ್ಸೆಯನ್ನು ಮುಂದುವರಿಸುವ ಜತೆಗೆ ಮುಂದಿನ ದಿನಗಳಲ್ಲಿ  ಲಸಿಕೆ ಲಭ್ಯವಾದರೆ ಅದನ್ನು ಎಲ್ಲರಿಗೂ ಉಚಿತವಾಗಿ ಪೂರೈಸಲು ಸರಕಾರ ಮುಂದಾಗಬೇಕೆಂದು ವಿನಂತಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: