ಮೈಸೂರು

ಪಕ್ಷಿ ಸಂತತಿ ಸಂರಕ್ಷಿಸುತ್ತಿರುವ ಪಶ್ಚಿಮಘಟ್ಟದ ಕೃಷಿ ಪ್ರದೇಶ

page-7-lead-2-webಮೈಸೂರು: ಕೃಷಿ ತೋಟಗಳು ಮತ್ತು ಅರಣ್ಯಗಳಿಂದ ಕೀಟಗಳು, ಉಭಯಚರಗಳು, ಸರೀಸೃಪಗಳು, ಸಸ್ತನಿಗಳು, ಪಕ್ಷಿಗಳು, ಬಾವಲಿಗಳು ಮತ್ತು ಇತರ ಜೀವಸಂತತಿಗಳ ಉಳಿವಿಗೆ ಕಾರಣವಾಗಿವೆ ಎಂಬುದು ಜಾಗತಿಕ ಮಟ್ಟದಲ್ಲಿ ಸಾಬೀತಾಗಿದೆ. ಭಾರತದ ಪಶ್ಚಿಮ ಘಟ್ಟ, ಚಿಕ್ಕ ಮತ್ತು ಸಂರಕ್ಷಿತ ಪ್ರದೇಶಗಳಲ್ಲಿ ಭೂಮಿಯನ್ನು ಹೆಚ್ಚಾಗಿ ಕೃಷಿಗಾಗಿ ಬಳಕೆ ಮಾಡಲಾಗುತ್ತಿದೆ. ಅಗ್ರೋಫಾರೆಸ್ಟ್‍ಗಳು ವನ್ಯಜೀವಿ ಉಳಿವಿಗೆ ಹೆಚ್ಚು ಸಹಕಾರಿಯಾಗಿದೆ.

ಕರ್ನಾಟಕದ ಪಶ್ಚಿಮ ಘಟ್ಟಗಳ ಅಡಕೆ, ಕಾಫಿ ಮತ್ತು ರಬ್ಬರ್‍ ಬೆಳೆಗಳನ್ನು ಬೆಳೆಯುವ ಪ್ರದೇಶಗಳಲ್ಲಿ ಹೆಚ್ಚು ಜೀವ ವೈವಿಧ್ಯಗಳು ಕಾಣಲು ಸಿಗುತ್ತವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ಫ್ರಂಟಿಯರ್ಸ್ ಇನ್ ಇಕೋಲಜಿ & ಇವಲ್ಯೂಷನ್ ‘ಭಾರತದ ಪಶ್ಚಿಮಘಟ್ಟಗಳಲ್ಲಿರುವ ಆಗ್ರೋಫಾರೆಸ್ಟ್‍ಗಳಲ್ಲಿ ಹಕ್ಕಿ ಸಂತತಿ ಜೀವ ವೈವಿಧ್ಯ ಮತ್ತು ಉಳಿವು’ ಎಂಬ ವಿಷಯದ ಮೇಲೆ ನಡೆಸಿದ ಅಧ್ಯಯನದಿಂದ ಈ ಮಾಹಿತಿ ತಿಳಿದುಬಂದಿದೆ.

ಅಡಕೆ ಮತ್ತು ರಬ್ಬರ್‍ ಬೆಳೆಗಿಂತಲೂ ಕಾಫಿ ಬೆಳೆ ಪ್ರದೇಶದಲ್ಲಿ ಹಕ್ಕಿಗಳ ಸಂತತಿ ಹೆಚ್ಚಿದೆ. ಅಲ್ಲದೆ, 13 ಹಕ್ಕಿಗಳ ಸಂತತಿ ಇಲ್ಲಿ ಕಾಣ ಸಿಕ್ಕಿದೆ ಎಂದು ಸಹಾಯಕ ಸಂರಕ್ಷಣಾ ವಿಜ್ಞಾನಿ ಡಾ.ಕೀರ್ತಿ ಕೆ. ಕಾರಂತ್ ತಿಳಿಸಿದ್ದಾರೆ. “ಸ್ವಲ್ಪ ದೊಡ್ಡ ದೇಹ ಹೊಂದಿರುವ ಹಕ್ಕಿಗಳಾದ ಪಾರಿವಾಳ ಮತ್ತು ಹಾರ್ನ್‍ಬಿಲ್‍ಗಳು ಕಾಫಿ ಬೆಳೆಗಳ ಮಧ್ಯೆ ಹೆಚ್ಚಿವೆ. ಬೀಜ ಪ್ರಸರಣ ಮತ್ತು ಅರಣ್ಯ ಪ್ರದೇಶದಲ್ಲಿರುವ ಮರಗಳ ಉಳಿವಿಗೆ ಇವು ಕಾರಣವಾಗಿವೆ” ಎಂದು ಪತ್ರಿಕೆ ಸಹ ಲೇಖಕ ಮತ್ತು ಪಕ್ಷಿ ವಿಜ್ಞಾನಿ ಅಭಿಪ್ರಾಯಪಟ್ಟಿದ್ದಾರೆ.

 

 

Leave a Reply

comments

Related Articles

error: