ಪ್ರಮುಖ ಸುದ್ದಿ

 ವನವಾಸಿ ಕಲ್ಯಾಣ ಕೊಡಗು ಜಿಲ್ಲಾ ಘಟಕದಿಂದ ಹಾಡಿಗಳ ಕುಟುಂಬಕ್ಕೆ ರೈನ್ ಕೋಟ್ ವಿತರಣೆ

ರಾಜ್ಯ(ಮಡಿಕೇರಿ) ಆ. 18 :- ಕೊಡಗಿನಲ್ಲಿ ಭಾರೀ ಮಳೆಗೆ ತೊಂದರೆ ಅನುಭವಿಸಿದ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಹಾಡಿಗಳ ಕುಟುಂಬಕ್ಕೆ ವನವಾಸಿ ಕಲ್ಯಾಣ ಕೊಡಗು ಜಿಲ್ಲಾ ಘಟಕದ ವತಿಯಿಂದ ಉಚಿತ ರೈನ್‍ಕೋಟ್ ವಿತರಣೆ ಮಾಡಲಾಯಿತು.

ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಾರ ಕಾಲೋನಿಯ ಒಂಬತ್ತು ಕುಟುಂಬ, ಅಯ್ಯಪ್ಪ ಕಾಲೋನಿಯ ಐದು ಕುಟುಂಬ, ಗುಟ್ಟುಕೊಲ್ಲಿ ಕಾಲೋನಿ ಹತ್ತು ಕುಟುಂಬ ಹಾಗೂ ಬಂಗಾಮ್ ಕಾಲೋನಿಯ ಏಳು ಕುಟುಂಬದವರಿಗೆ ಸಂಘದ ಪ್ರಮುಖರು ರೈನ್ ಕೋಟ್ ವಿತರಿಸಿದರು.

ಈ ಸಂದರ್ಭದಲ್ಲಿ ವನವಾಸಿ ಕಲ್ಯಾಣ ಕೊಡಗು ಜಿಲ್ಲಾ ಘಟಕದ ಉಪಾಧ್ಯಕ್ಷ ಚೆಟ್ಟಂಗಡ ಮಹೇಶ್ ಮಂದಣ್ಣ, ಜಿಲ್ಲಾ ಸಂಘಟನಾ  ಕಾರ್ಯದರ್ಶಿ ಹರೀಶ್, ಮಹಿಳಾ ಕಾರ್ಯಕರ್ತೆ ಸರೋಜ,  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾದ ಕಟ್ಟೇರ ಬೋಪಣ್ಣ, ಮಾಣೀರ ಬೋಪಣ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಞ್ಞಂಗಡ ಅರುಣ್ ಭೀಮಯ್ಯ,  ಹಾಗೂ ವಿರಾಜಪೇಟೆ ತಾಲೂಕು ಕೃಷಿ ಮೋರ್ಚದ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: