ಮೈಸೂರು

ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಎಸ್.ಎ.ರಾಮದಾಸ್ ಗುದ್ದಲಿಪೂಜೆ

ಮೈಸೂರು,ಆ.18:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೈಗೆತ್ತಿಕೊಳ್ಳಲಾದ ಮೈಸೂರು ಮಾನಂದವಾಡಿ ಮುಖ್ಯ ರಸ್ತೆಯಿಂದ ಜೆ.ಪಿ.ನಗರ 1ನೇ ಹಂತದ ರೈಲ್ವೆ ಕ್ರಾಸಿಂಗ್ ವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಎಸ್.ಎ.ರಾಮದಾಸ್ ಇಂದು ಬೆಳಿಗ್ಗೆ ಗುದ್ದಲಿಪೂಜೆ ನೆರವೇರಿಸಿದರು.

ಕಾಮಗಾರಿಯ ಅಂದಾಜು ಮೊತ್ತ 100.00ರೂ.ಲಕ್ಷ, ಟೆಂಡರ್ ಮೊತ್ತ 89,38,836ರೂ.(12.03%ಕಡಿಮೆ) ಆಗಿದ್ದು ಐದು ತಿಂಗಳ ಕಾಲಾವಕಾಶವನ್ನು ಗುತ್ತಿಗೆದಾರ ಎಸ್.ಶ್ರೀನಿವಾಸ್ ಅವರಿಗೆ ನೀಡಲಾಗಿದೆ. ಮೈಸೂರು ಮಾನಂದವಾಡಿ ಮುಖ್ಯ ರಸ್ತೆಯಿಂದ(ಪಾಳ್ಯ, ಕಾಮಾಕ್ಷಿ ಆಸ್ಪತ್ರೆ ರಸ್ತೆ) ಜೆ.ಪಿ.ನಗರ 1ನೇ ಹಂತದ (ಕೊನೆಯ ಬಸ್ ನಿಲ್ದಾಣ)ರೈಲ್ವೆ ಕ್ರಾಸಿಂಗ್ ವರೆಗೆ ರಸ್ತೆ ಅಗಲೀಕರಣ ಮಾಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ 480ಮೀ ಉದ್ದದವರೆಗೆ ಬಾಕ್ಸ್ ಮಾದರಿ ಆರ್ ಸಿಸಿ ಚರಂಡಿ ನಿರ್ಮಿಸಲಾಗುತ್ತಿದೆ. ರಸ್ತೆಯ ಉದ್ದಕ್ಕೂ  ಜಿ.ಎಸ್.ಬಿ ಹಾಗೂ ವೆಟ್ ಮಿಕ್ಸ್ ಪದರಗಳನ್ನು ಅಳವಡಿಸಲಾಗುತ್ತಿದೆ. ರಸ್ತೆಯ 790 ಮೀ ಉದ್ದದವರೆಗೆ 5.50ಮೀ ಅಗಲಕ್ಕೆ 50ಎಂ ಎಂ ಪದರದ ಬಿಎಂ ಮತ್ತು ಎಂ.ಎಂ.ಪದರಸ ಎಸ್ ಡಿಬಿಸಿ ಕೆಲಸ ಕೈಗೊಂಡು ರಸ್ತೆಗೆ ಲೇನ್ ಪೇಂಟಿಂಗ್ ಅಳವಡಿಸಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: