ಮನರಂಜನೆ

ರಮೇಶ್ ಅರವಿಂದ್ 100ನೇ ಚಿತ್ರ ‘ಪುಷ್ಪಕ ವಿಮಾನ’ ಪ್ರದರ್ಶನಕ್ಕೆ ತಡೆ

ರಮೇಶ್ ಅರವಿಂದ್ ಅಭಿನಯದ `100ನೇ ಚಿತ್ರ ‘ಪುಷ್ಪಕ ವಿಮಾನ’ ವನ್ನು ಕಿರುತೆರೆಯ ಪ್ರದರ್ಶನಕ್ಕೆ ಬಾಂಬೆ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಕಾಪಿರೈಟ್ ಉಲ್ಲಂಘಿಸಿ ದಕ್ಷಿಣ ಕೊರಿಯಾದ ‘ಮಿರಾಕಲ್ ಇನ್ ಸೆಲ್ ನಂ7’ ಚಿತ್ರವನ್ನು ನಿಯಮಾವಳಿ ಮೀರಿ ನಕಲು ಮಾಡಿದ ಹಿನ್ನೆಲೆಯಲ್ಲಿ  ಚಿತ್ರ ಪ್ರದರ್ಶನಕ್ಕೆ ತಡೆ ನೀಡಲಾಗಿದೆ. ದಕ್ಷಿಣ ಕೊರಿಯಾದ ಚಿತ್ರ ನಿರ್ಮಾಣ ಸಂಸ್ಥೆ ಕಾಪಿರೈಟ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿತ್ತು.

ಹಾಗಾಗಿ ಮುಂದಿನ ದಿನಗಳಲ್ಲಿ ಚಿತ್ರವನ್ನು ಕಿರುತೆರೆ ಸೇರಿದಂತೆ ಎಲ್ಲಿಯೂ ಪ್ರಸಾರ ಮಾಡುವಂತಿಲ್ಲ. ಸಿಡಿ ಮತ್ತು ಡಿವಿಡಿಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂ ಪ್ರಶಸ್ತಿಗೂ ಪರಿಗಣಿಸಬಾರದೆಂದು ಬಾಂಬೆ ಹೈಕೋರ್ಟ್ ಆದೇಶ ನೀಡಿದೆ. (ಕೆ.ಎಂ.ಆರ್)

Leave a Reply

comments

Related Articles

error: