ನಮ್ಮೂರುಮೈಸೂರು

ಇಂಗ್ಲೀಷ್ ಸಿದ್ಧಾಂತ ಮತ್ತು ಅನುಷ್ಠಾನ ಕಾರ್ಯಾಗಾರ

ಜೆ.ಪಿ.ನಗರದಲ್ಲಿರುವ ಹಿಂದುಸ್ತಾನ್ ಪ್ರಥಮ ಪಿಯು ಕಾಲೇಜಿನಲ್ಲಿ ಒಂದು ದಿನದ ಇಂಗ್ಲಿಷ್ ಸಿದ್ಧಾಂತ ಮತ್ತು ಅನುಷ್ಠಾನ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಅರುಣಾಚಲ ಪ್ರದೇಶದ ರಾಜೀವ ಗಾಂಧಿ ಸೆಂಟ್ರಲ್ ಯುನಿವರ್ಸಿಟಿಯ ಮಾಜಿ ಕುಲಪತಿ ಪ್ರೊ.ಕೆ.ಸಿ.ಬೆಳ್ಳಿಯಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದರಲ್ಲದೆ, ತನ್ನ ಇಂಗ್ಲಿಷ್ ಉಪನ್ಯಾಸಕ ವೃತ್ತಿಯ ಕೆಲವು ನೆನಪುಗಳನ್ನು ಹಂಚಿಕೊಂಡರು.

ಹೈದ್ರಾಬಾದ್ ನ ಫಾರಿನ್ ಲ್ಯಾಂಗ್ವೇಜಸ್ ಯುನಿವರ್ಸಿಟಿಯ ಪ್ರೊ.ಜಿ.ರಾಜಗೋಪಾಲ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಲಕ್ಷ್ಮಿ ಸಿ.ಆರ್ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಉಪನ್ಯಾಸಕಿ ನಯನ ಹಶ್ಮಿ ಅತಿಥಿಗಳನ್ನು ಪರಿಚಯಿಸಿದರು.

ಈ ಸಂದರ್ಭ ಪ್ರಾಂಶುಪಾಲ ಡಾ.ಸುಜಾತಾ ಕೃಷ್ಣಮೂರ್ತಿ, ಉಪಪ್ರಾಂಶುಪಾಲ ಚೇತನ್ .ಎಚ್, ಕಾರ್ಯಾಗಾರದ ಸಂಯೋಜಕಿ ನಾಗಶ್ರೀ ಎಸ್ ಉಪಸ್ಥಿತರಿದ್ದರು.

ಕಾರ್ಯಾಗಾರದ ಮೊದಲ ಭಾಗದಲ್ಲಿ ಇಂಗ್ಲೀಷ್ ಭಾಷಾ ಕಲಿಕೆಯ ಉದ್ದೇಶಗಳನ್ನು ತಿಳಿಸಲಾಯಿತು. ಎರಡನೇಯ ಭಾಗದಲ್ಲಿ ಸಾಮರ್ಥಯಗಳ ಮೇಲೆ ಬೆಳಕು ಚೆಲ್ಲಲಾಯಿತು. ಕಾರ್ಯಾಗಾರದಲ್ಲಿ ಮೈಸೂರು ಸುತ್ತಮುತ್ತಲಿನ ವಿವಿಧ ಕಾಲೇಜುಗಳಿಂದ 60 ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಚಾಮರಾಜನಗರ, ಕೊಳ್ಳೇಗಾಲ, ನಂಜನಗೂಡು, ರಾಮನಗರ, ಹೆಚ್.ಡಿ.ಕೋಟೆ, ನಾಗಮಂಗಲ ಮತ್ತು ಟಿ.ನರಸೀಪುರ ಪ್ರತಿನಿಧಿಗಳು ಹುರುಪಿನಿಂದ ಪಾಲ್ಗೊಂಡರು. ಕೊಯಮತ್ತೂರಿನಿಂದಲೂ ಭಾಗವಹಿಸಿರುವುದು ಕಂಡು ಬಂತು.

Leave a Reply

comments

Related Articles

error: