ಮೈಸೂರು

ಚೆಕ್ ಪೋಸ್ಟ್ ನಲ್ಲಿರುವ ಅಧಿಕಾರಿಗಳು ಅನಗತ್ಯ ತೊಂದರೆ ನೀಡುತ್ತಿದ್ದಾರೆ ಕ್ರಮ ಕೈಗೊಳ್ಳಿ : ಶೋಭಾ ಕರಂದ್ಲಾಜೆ ಮನವಿ

ಚುನಾವಣೆಗಾಗಿ ನಿಯೋಜಿಸಿರುವ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಿಗೆ ಮತ್ತು ತಾರಾ ಪ್ರಚಾರಕರಿಗೆ ತೊಂದರೆ ನೀಡಿ ಬಿಜೆಪಿ ಚಿಹ್ನೆಯಿರುವ ಪ್ರಚಾರ ಸಾಮಾಗ್ರಿಗಳನ್ನು ಕಾರಣವಿಲ್ಲದೇ ವಶಪಡಿಸಿಕೊಂಡು ಕಮಲದ ಚಿಹ್ನೆಗೆ ಅವಮಾನ ಮಾಡಿದ್ದಾರೆ. ಅಧಿಕಾರಿಗಳು ಏಕಪಕ್ಷೀಯವಾಗಿ ಕೆಲಸ ಮಾಡುತ್ತಿರುವಂತೆ ತೋರುತ್ತಿದ್ದು, ಚೆಕ್ ಪೋಸ್ಟ್ ನಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ತಕ್ಷಣವೇ ಬದಲಾಯಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ತಾರಾ ಪ್ರಚಾರಕರು ಕ್ಷೇತ್ರದಲ್ಲಿ ಸಂಚರಿಸುವ ಮತ್ತು ಪ್ರಚಾರ ಮಾಡುವ ಅವಧಿಯಲ್ಲಿ ಅಧಿಕಾರಿಗಳು ಅವರನ್ನು ಅಲ್ಲಲ್ಲಿ ತಡೆಯುವುದು, ಅಸಂಬದ್ಧ ಪ್ರಶ್ನೆಗಳನ್ನು ಕೇಳುವುದು ಮಾಡುತ್ತಾರೆ. ಅಷ್ಟೇ ಅಲ್ಲದೇ ಮಾರ್ಚ್.31ರ ರಾತ್ರಿ ನಂಜನಗೂಡು ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಕಾರ್ಯ ನಿರ್ವಹಿಸುತ್ತಿರುವ ನಾಗರಾಜು ಎಂಬ ಸಿಬ್ಬಂದಿ ಬಿಜೆಪಿ ಕಾರ್ಯಕರ್ತರ ಶಲ್ಯವನ್ನು ಕಾರ್ಯಕರ್ತರಿಂದ ಕಿತ್ತುಕೊಂಡಿರುತ್ತಾರೆ. ನಂಜನಗೂಡು ತಾಲೂಕು ಹುಲ್ಲಹಳ್ಳಿ ಮತ್ತು ಹುರ ಗ್ರಾಮದಲ್ಲಿಯೂ ಸಹ ಇದೇ ರೀತಿ ಬಿಜೆಪಿ ಚಿಹ್ನೆಯಿರುವ ಪ್ರಚಾರ ಸಾಮಗ್ರಿಗಳನ್ನು ಅಧಿಕಾರಿಗಳು ಕಿತ್ತುಕೊಂಡಿರುತ್ತಾರೆ. ಅವರಿಗೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ತಿಳಿಸಿ ಎಂದರು. ಈ ಸಂದರ್ಭ ಮಾಜಿ ಸಚಿವ ಸೋಮಣ್ಣ ಮತ್ತಿತರ ಬಿಜೆಪಿ ಕಾರ್ಯಕರ್ತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: