ದೇಶಪ್ರಮುಖ ಸುದ್ದಿ

ರಾಜೀವ್ ಗಾಂಧಿ ಜನ್ಮದಿನ: ಗೌರವ ಸಲ್ಲಿಸಿದ ಪ್ರಧಾನಿ ಮೋದಿ  

ನವದೆಹಲಿ,ಆ.20-ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್ ಗಾಂಧಿಯವರ 76ನೇ ಜನ್ಮದಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗೌರವ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜೀವ್ ಗಾಂಧಿಯವರಿಗೆ 76ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ನನ್ನ ಗೌರವಾರ್ಪಣೆ ಎಂದು ಬರೆದಿದ್ದಾರೆ.

1944 ಆಗಸ್ಟ್ 20 ರಂದು ಜನಿಸಿದ ಅವರು 1984ರ ಅಕ್ಟೋಬರ್​ ತಿಂಗಳಲ್ಲಿ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆಗ ಅವರು ದೇಶದ ಅತ್ಯಂತ ಯುವ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾಗಿದ್ದರು. ಅವರು 1989ರ ಡಿಸೆಂಬರ್ 2ರ ತನಕ ಪ್ರಧಾನಿಯಾಗಿದ್ದರು. 1991 ಮೇ ತಿಂಗಳಲ್ಲಿ ತಮಿಳುನಾಡಿನ ಶ್ರೀಪೆರುಂಬದೂರ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ವೇಳೆ ಎಲ್​ಟಿಟಿಇ ಉಗ್ರರ ಆತ್ಮಹತ್ಯಾ ದಾಳಿಗೆ ಬಲಿಯಾದರು. ಕಾಂಗ್ರೆಸ್ ಪಕ್ಷ ರಾಜೀವ್ ಅವರ ಜನ್ಮದಿನವನ್ನು ಸದ್ಭಾವನಾ ದಿನ ಎಂದು ಆಚರಿಸುತ್ತಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: