ಮೈಸೂರು

ಪ್ರವಾಸಿ ಬಸ್ ಹಾಗೂ ಎಲ್ಲಾ ವಾಹನಗಳ ತೆರಿಗೆ ಹಣ ಕಡಿತ,ಬ್ಯಾಂಕ್ ಮತ್ತು ಫೈನಾನ್ಸ್ ಸಾಲದ ಮರುಪಾವತಿ ಮಾಡಲು ಕಾಲಾವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಆ.20:- ಪ್ರವಾಸಿ ಬಸ್ ಹಾಗೂ ಎಲ್ಲಾ ವಾಹನಗಳ ತೆರಿಗೆ ಹಣ ಕಡಿತ ಹಾಗೂ ಬ್ಯಾಂಕ್ ಮತ್ತು ಫೈನಾನ್ಸ್ ಸಾಲದ ಮರುಪಾವತಿ ಮಾಡಲು ಕಾಲಾವಕಾಶ ನೀಡುವಂತೆ ಒತ್ತಾಯಿಸಿ ಮೈಸೂರು ಜಿಲ್ಲೆ ಪ್ರವಾಸಿ ಬಸ್ ಮಾಲೀಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ವಿಶ್ವಾದ್ಯಂತ ಹಾಗೂ ದೇಶಾದ್ಯಂತ ಕೋವಿಡ್-19 ರೋಗ ಹರಡುವುದನ್ನು ತಡೆಯಲು  ಮಾರ್ಚ್ 24ರಿಂದ ಲಾಕ್ ಡೌನ್ ಹೇರಿದ ಪರಿಣಾಮ ಎಲ್ಲಾ ಪ್ರವಾಸಿ ವಾಹನಗಳ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದ್ದು, ರಾಷ್ಟ್ರ ಲಾಕ್ ಡೌನ್ ವಿಸ್ತರಿಸಿ ಪ್ರವಾಸಿತಾಣಗಳು ಹಾಗೂ ಶುಭ ಸಮಾರಂಭಗಳು ಸಂಪೂರ್ಣವಾಗಿ ನಿಷೇಧಿಸಿದ ಕಾರಣ ಪ್ರವಾಸಿ ವಾಹನದ ಮಾಲೀಕರಿಗೆ ಹಾಗೂ ಚಾಲಕರಿಗೆ ಅಂದಿನಿಂದ ಇಂದಿನವರೆಗೆ ಆರ್ಥಿಕ ನಷ್ಟ ಉಂಟಾಗಿದ್ದು ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ಆರ್ಥಿಕ ಪರಿಸ್ಥಿತಿಯಿಂದ ಹೊರಬರಲು ಸುಮಾರು 2ವರ್ಷಗಳ ಕಾಲ ಅವಧಿ ಬೇಕಾಗಿದ್ದು ಈ ವಿಷಯವಾಗಿ ಪ್ರವಾಸಿ ಬಸ್ ತೆರಿಗೆ ಹಣವನ್ನು ಕನಿಷ್ಠ 6ತಿಂಗಳ ಕಾಲ ಸಂಪೂರ್ಣವಾಗಿ ಕಡಿತಗೊಳಿಸಬೇಕು. ಮುಂದಿನ 6ತಿಂಗಳು ತೆರಿಗೆ ಶೇಖಡಾ ಅರ್ಧದಷ್ಟು ಪಾವತಿಸಿಕೊಳ್ಳಬೇಕು. ಬ್ಯಾಂಕ್ ಮತ್ತು ಫೈನಾನ್ಸ್ ನಲ್ಲಿ ಕೊಟ್ಟಿರುವ 6ತಿಂಗಳು ಕಾಲಾವಕಾಶ ಸಾಲದು. ಇನ್ನು ಮುಂದಿನ 6ತಿಂಗಳು ಕಾಲಾವಕಾಶ ಕೊಡಬೇಕಾಗಿದ್ದು ಹಾಗೂ ಸಾಲದ ಮೊತ್ತಕ್ಕೆ ಯಾವುದೆ  ಓ.ಡಿ ಬಡ್ಡಿಯನ್ನು ಪಾವತಿ ಮಾಡಿಕೊಳ್ಳಬಾರದೆಂದು ಮನವಿ ಮಾಡಿದರು. ಕೇಂದ್ರ ಸರ್ಕಾರದ ಆದೇಶದಂತೆ ಎಂ.ಎಸ್.ಎಂ.ಇ ಕಂಪೆನಿಗಳಿಗೆ ನಮ್ಮ ಯೆಲ್ಲೋ ಬೋರ್ಡ್ ವಾಹನಗಳನ್ನು ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿದರು. ಆದಷ್ಟು ಶೀಘ್ರದಲ್ಲಿ ನಮ್ಮ ಮನವಿಗೆ ಸ್ಪಂದಿಸಿ, ಇಲ್ಲದಿದ್ದಲ್ಲಿ ಮೈಸೂರು ಜಿಲ್ಲೆಯಲ್ಲಿ ಉಗ್ರವಾದ ಹೋರಾಟ ಮತ್ತು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ಎ.ವಿ. ಪೃಥ್ವಿರಾಜ್, ಉಪಾಧ್ಯಕ್ಷ  ಹೆಚ್.ಎನ್.ರಾಜಶೇಖರ್, ನಾರಾಯಣಗೌಡ, ಗಿರೀಶ್, ದಯಾನಂದಮೂರ್ತಿ, ಪ್ರಕಾಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: