ಕರ್ನಾಟಕಪ್ರಮುಖ ಸುದ್ದಿ

ಸಚಿವ ಕೃಷ್ಣ ಭೈರೇಗೌಡರ ಹಿಂಬಾಲಕರಿಂದ ಭೂಕಬಳಿಕೆ ನಡೆದಿದೆ : ಆರೋಪ

ಕೃಷಿ ಸಚಿವ ಕೃಷ್ಣ ಭೈರೇಗೌಡರ ಹಿಂಬಾಲಕರಿಂದ ಮತ್ತೊಂದು ಬೃಹತ್ ಸರ್ಕಾರೀ ಭೂಕಬಳಿಕೆ ಹಗರಣ ನಡೆದಿದೆ ಎಂದು ತಿಳಿದುಬಂದಿದೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸರ್ಕಾರೀ ಸ್ವತ್ತು, ಬಿಬಿಎಂಪಿ ವಾರ್ಡ್ ಸಂಖ್ಯೆ 11 ರ ಸಿಂಗಾಪುರ ಗ್ರಾಮದ ಸರ್ವೆ ನಂ. 109 ರ ಸರ್ಕಾರೀ ಭೂಮಿ, ಕುವೆಂಪು ನಗರ ವಾರ್ಡ್ ವ್ಯಾಪ್ತಿಯಲ್ಲಿರುವ ಸಿಂಗಾಪುರ ಗ್ರಾಮದ ಸರ್ವೆ ನಂ. 109 ರ 117.13 ಎಕರೆ ಗಳಷ್ಟು ವಿಸ್ತೀರ್ಣದ ಸರ್ಕಾರೀ ಸ್ವತ್ತನ್ನು ಸಂಪೂರ್ಣವಾಗಿ ಕಬಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸಚಿವ ಕೃಷ್ಣ ಭೈರೇಗೌಡರ ಹಿಂಬಾಲಕರು ಈ ಸ್ವತ್ತನ್ನು ಸಂಪೂರ್ಣವಾಗಿ ಕಬಳಿಸಿದ್ದಾರೆನ್ನುವ ಬಗ್ಗೆ ದಾಖಲೆಗಳನ್ನು ಬಿಡುಗಡೆಗೊಳಿಸಲಾಗಿದೆ.
ಸಿಂಗಾಪುರ ಗ್ರಾಮದ ಸರ್ವೆ ನಂ. 109ರ 226.15 ಎಕರೆಗಳಷ್ಟು ಸರ್ಕಾರೀ ಸ್ವತ್ತಿನ ಪೈಕಿ, 117.13 ಎಕೆರಗಳಷ್ಟು ಸ್ವತ್ತಿಗೆ ನಕಲಿ ದಾಖಲೆಗಳ ಸೃಷ್ಟಿಯಾಗಿದೆ. ಕಾನೂನು ಬಾಹಿರವಾಗಿ 15 ಮಂದಿ ಹೆಸರಿಗೆ ದಾಖಲೆ ಸೃಷ್ಟಿಸಲಾಗಿದೆ. 117.13 ಎಕರೆ ಸರ್ಕಾರೀ ಸ್ವತ್ತನ್ನು 15 ಮಂದಿ ಸರ್ಕಾರೀ ನೆಲಗಳ್ಳರ ಹೆಸರಿಗೆ ದಾಖಲೆ ಮಾಡಿದ್ದು ಹೇಗೆ ಎಂಬ ಪ್ರಶ್ನೆಯೀಗ ಎದುರಾಗಿದೆ.
2007 ರಿಂದ 2016 ರವರೆಗೆ ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರ್ಗಳಾಗಿ ಕರ್ತವ್ಯ ನಿರ್ವಹಿಸಿದ ಎಲ್ಲರೂ ಈ ಹಗರಣದಲ್ಲಿ ಭಾಗಿಗಳು ಎನ್. ಆರ್. ರಮೇಶ್ ತಿಳಿಸಿದ್ದಾರೆ. ಇದೇ ಪ್ರದೇಶದ ಸಿಂಗಾಪುರ ಕೆರೆ ಮತ್ತು ಅಬ್ಬಿಗೆರೆ ಕೆರೆಗಳನ್ನೂ ಸಹ ಸಂಪೂರ್ಣವಾಗಿ ಕಬಳಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: