ಮನರಂಜನೆಮೈಸೂರು

“ಪಾರ್ವತಿ” ಆನೆ ದತ್ತು ಪಡೆದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್

ಮೈಸೂರು.ಆ.20 :-  ಕನ್ನಡ ಚಲನಚಿತ್ರ ನಟ ಹ್ಯಾಟ್ರಿಕ್ ಹಿರೋ ಡಾ.ಶಿವರಾಜ್ ಕುಮಾರ್ ಅವರು ಮೈಸೂರು ಮೃಗಾಲಯದ ಭಾರತದ ಆನೆ “ಪಾರ್ವತಿ”ಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದಾರೆ.
ಕೋವಿಡ್-19 ಸಂದರ್ಭದಲ್ಲಿ ನಟ ಶಿವರಾಜ ಕುಮಾರ್ ಅವರು ಭಾರತದ ಆನೆ “ಪಾರ್ವತಿ”ಯನ್ನು 20-08-2020 ರಿಂದ 19-08-2021 ರ ಅವಧಿಗೆ ದತ್ತು ಪಡೆದು, ಮೃಗಾಲಯ ಮತ್ತು ಪ್ರಾಣಿಗಳ ನಿರ್ವಹಣೆಗೆ ಸಹಕಾರ ನೀಡಿರುವುದಕ್ಕೆ ಮೈಸೂರು ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿದೇಶಕರಾದ ಅಜಿತ್ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: