ಮೈಸೂರು

ಯಶಸ್ಸು ಸಿಗಲು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳಲ್ಲೂ ಮುಂದಿರಬೇಕು : ಪ್ರೊ.ರಾಜಣ್ಣ

ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದಿರದೆ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಚಟುವಟಿಕೆಗಳಲ್ಲೂ ಮುಂದಿದ್ದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ  ಪ್ರೊ.ಆರ್.ರಾಜಣ್ಣ ಅಭಿಪ್ರಾಯಪಟ್ಟರು.

ಶನಿವಾರ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಜ್ಞಾನ ವಾಹಿನಿ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ಎನ್‍ಸಿಸಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನಕ್ಕೆ ಯುವರಾಜ ಕಾಲೇಜು ತನ್ನದೇ ಆದ ಕೊಡುಗೆ ನೀಡಿದೆ. ಇಲ್ಲಿ ಓದಿದ ಅನೇಕರು ರಾಜಕೀಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ್ದು ತಮ್ಮ ಹೆಜ್ಜೆ ಗುರುತುಗಳನ್ನು ಕಾಲೇಜಿನಲ್ಲಿ ಬಿಟ್ಟು ಹೋಗಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣದ ದಾಹವನ್ನು ಶಾಲಾ ಕಾಲೇಜುಗಳಲ್ಲಿ ತೀರಿಸಿಕೊಳ್ಳುವಂತೆ ಪಠ್ಯೇತರ ದಾಹವನ್ನು ಸಹ ತೀರಿಸಿಕೊಳ್ಳಬೇಕು. ಕೇವಲ ಪಠ್ಯಕ್ಕೆ ಸೀಮಿತವಾಗದೆ ಸಾಂಸ್ಕೃತಿಕ ಸಾಹಿತ್ಯಿಕ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದೇವರಾಜ ಠಾಣೆ ವಿಭಾಗದ ಎಸಿಪಿ ಬಿ.ಎಸ್.ರಾಜಶೇಖರ್, ಲಕ್ಷ್ಮಿಪುರಂ ಠಾಣೆಯ ಇನ್ಸ್‍ಪೆಕ್ಟರ್ ಸಿದ್ದರಾಜು, ಪ್ರಾಂಶುಪಾಲ ಡಾ.ಆರ್.ಗಣೇಶ್, ಆಡಳಿತಾಧಿಕಾರಿ ಡಾ.ಹೆಚ್.ಎನ್.ಕಾಂತಲಕ್ಷ್ಮಿ, ಪರೀಕ್ಷಾ ನಿಯಂತ್ರನಾಧಿಕಾರಿ ಡಾ.ಬಿ.ಎಂ ವೆಂಕಟೇಶ ಜ್ಞಾನವಾಹಿನಿ ಸಮಿತಿಯ ಸಂಚಾಲಕ ಡಿ.ಕೆ.ಶ್ರೀನಿವಾಸ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಸಂಭ್ರಮಿಸಿದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: