
ಮೈಸೂರು
ಆನ್ ಲೈನ್ ಶಿಕ್ಷಣ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ನೀಡುವಂತೆ ಗಮನ ಸೆಳೆದ ಸುಧಾಕರ್ ಶೆಟ್ಟಿ
ಮೈಸೂರು,ಆ.24:- ಸ್ವಾತಂತ್ರ ಪೂರ್ವದಲ್ಲಿ 15 ಕೋಟಿಯಿದ್ದ ಜನಸಂಖ್ಯೆ ಈಗ 138 ಕೋಟಿಯತ್ತ ದಾಪುಗಾಲು ಹಾಕುತ್ತಿದೆ. ನಗರಗಳಲ್ಲಿ 48 ಕೋಟಿ ಜನಸಂಖ್ಯೆಯು ವಾಸಿಸುತ್ತಿದ್ದು ಇನ್ನುಳಿದ 90 ಕೋಟಿ ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 15-34 ವಯಸ್ಸುಳ್ಳ ವಿದ್ಯರ್ಥಿಗಳ ಸಂಖ್ಯೆ 46 ಕೋಟಿಯಿದ್ದು, 15 ಕೋಟಿ ವಿದ್ಯರ್ಥಿಗಳು ಗಾಮೀಣ ಪ್ರದೇಶದ ಆನ್ಲೈನ್ ಶಿಕ್ಷಣ ದ ಕೊರತೆಯಿದೆ ಎಂದು ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಒಕ್ಕೂಟ ಮಾಜಿ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ತಿಳಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು ಈ ಕೊರೋನವೆಂಬ ಮಹಾಮಾರಿಯಿಂದಾಗಿ ಶಿಕ್ಷಣ ಕ್ಷೇತ್ರದ ಕಲಿಕೆಯ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳಾಗಿದ್ದು , ಶಿಕ್ಷಣವನ್ನು ಅನಲೈನ್ ಮೂಲಕ ನೀಡಬೇಕೆಂದು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದು ತುಂಬಾ ಕಠಿಣವಾಗಿ ಪರಿಣಮಿಸುತ್ತಿದ್ದು ಕಲಿಕೆಯನ್ನು ಮುಂದುವರಿಸುವಲ್ಲಿ ಪರಿತಪ್ಪಿಸುತ್ತಿದ್ದಾರೆ.
ಅದಕ್ಕೆ ಕಾರಣಗಳೆಂದರೆ ಮೊದಲಿಗೆ ಅವರ ಬಳಿ ಕಲಿಯಲು ಯಾವುದೇ ರೀತಿಯ ಯಾಂತ್ರಿಕ ಉಪಕರಣಗಳಾದ ಮೊಬೈಲ್, ಲ್ಯಾಪ್ಟಾಪ್, ಟ್ಯಾಬ್ ಹಾಗೂ ಇನ್ನಿತರ ವಸ್ತುಗಳ ಲಭ್ಯತೆಗಳು ಇಲ್ಲದಿರುವುದು ಮತ್ತು ಅದನ್ನು ಕೊಂಡುಕೊಳ್ಳಲು ತಗುಲುವ ವೆಚ್ಚವನ್ನು ಸಹ ಬರಿಸಲು ಸಾಧ್ಯವಾಗದಿರುವುದೇ ಆಗಿದೆ. ಹಾಗಾಗಿ ಈ ವಿಚಾರವನ್ನು ಈ ಸರ್ಕಾರದ ಗಮನಕ್ಕೆ ತರಲು ಇಚ್ಛಿಸುತ್ತೇನೆ. ತಾವು ಈ ವಿಚಾರವನ್ನು ಗಣನೆಗೆ ತೆಗೆದುಕೊಂಡು ಅರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ನೀಡಿದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅದು ಅನೂಕೂಲವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. (ಜಿ.ಕೆ,ಎಸ್.ಎಚ್)