ಕರ್ನಾಟಕಪ್ರಮುಖ ಸುದ್ದಿಮೈಸೂರು

ದಸರಾ ಉದ್ಘಾಟನೆಗೆ ಆಗಮಿಸಿದ ನಾಡೋಜ ಚನ್ನವೀರಕಣವಿ : ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯ

ನಾಡಹಬ್ಬ ದಸರಾ ಮಹೋತ್ಸವ 2016ನ್ನು ನಾಡಿನ ಹಿರಿಯ ಸಾಹಿತಿ, ಚಿಂತಕ ನಾಡೋಜ ಚನ್ನವೀರಕಣವಿಯವರು ಉದ್ಘಾಟಿಸಲಿದ್ದು  ಸೆ.29 ರಂದು ಬೆಳಿಗ್ಗೆ 7:30ಕ್ಕೆ ಧಾರವಾಡ ಕ್ಸ್ ಪ್ರೆಸ್ ನಲ್ಲಿ ನಗರಕ್ಕೆ ಆಗಮಿಸಿದರು. ಸಂದರ್ಭ  ಸಂಸದ ಪ್ರತಾಪ್ ಸಿಂಹ ರೈಲು ನಿಲ್ದಾಣದಲ್ಲಿ ಕಣವಿಯವರಿಗೆ ಮೈಸೂರು ಪೇಟ ತೊಡಿಸಿ ಗಂಧದ ಹಾರ ಹಾಕಿ ಸಾಂಪ್ರದಾಯಿಕ ಸ್ವಾಗತ ಕೋರಿದರು. ತಹಸೀಲ್ದಾರ್ ರಮೇಶ್ ಬಾಬು ಹೂಗುಚ್ಛ ನೀಡಿ ಗೌರವಿಸಿದರು.

ರೈಲು ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಣವಿಯವರು ಬಾರಿಯ ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ನನ್ನನ್ನು ಆಹ್ವಾನಿಸಿರುವುದು ಅತ್ಯಂತ ಸಂತಸ ತಂದಿದೆ.  ಉದ್ಘಾಟನೆಗೆ ನನ್ನಿಂದ ಯಾವುದೇ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಮುಂಚಿತವಾಗಿಯೇ ಮೈಸೂರಿಗೆ ಆಗಮಿಸಿದ್ದೇನೆ ಎಂದು ತಿಳಿಸಿದ ಅವರು, ಕಾಲೇಜಿನ ದಿನಗಳಲ್ಲಿ ದಸರಾ ಮಹೋತ್ಸವ ನೋಡಲು ಮೈಸೂರಿಗೆ ಆಗಮಿಸುತ್ತಿದ್ದೆ ಎಂದು ದಿನಗಳನ್ನು ಮೆಲುಕು ಹಾಕಿ, ಹಿಂದೆ ದಸರಾ ಕವಿಗೋಷ್ಠಿಯನ್ನು ಉದ್ಘಾಟಿಸಿದ್ದೆ ಬಾರಿಯ ದಸರಾ ಉದ್ಘಾಟಿಸಲು ಪುಳಕಿನಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರುಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಪ್ರಸ್ತುತ ದಿನಮಾನಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಧರಣಿ ಬಗ್ಗೆ ಪ್ರತಿಕ್ರಿಯಿಸಿ, ಧರಣಿ ನಿರತರು ಉದ್ರಿಕ್ತರಾಗದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ಸಾರ್ವಜನಿಕ ಆಸ್ತಿಪಾಸ್ತಿಗಳ ನಷ್ಟ ಮಾಡದೆ ಸಂಯಮದಿಂದ ವರ್ತಿಸಬೇಕು ಎಂದು ಕರೆ ನೀಡಿದರು.

ಪುತ್ರನ ಜೊತೆ ಆಗಮಿಸಿರುವ ಅವರು ನಗರದ ಖಾಸಗಿ ಹೋಟೆಲ್ ನಲ್ಲಿ ಇಂದು ವಿಶ್ರಾಂತಿ ಪಡೆಯಲಿದ್ದಾರೆ.

ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯ: ಚಾಮುಂಡಿ ಬೆಟ್ಟದಲ್ಲಿ ಅಕ್ಟೋಬರ್ 1ರಂದು ಬೆಳಗ್ಗೆ 11 : 40 ಧನುರ್ ಲಗ್ನದಲ್ಲಿ ಶುಭಾರಂಭವಾಗುವ ದಸರಾ ಉದ್ಘಾಟನೆಗೆ ನಾಡೋಜ ಚನ್ನವೀರಕಣವಿಯವರನ್ನು ಧಾರವಾಡದ ಸ್ವಗೃಹಕ್ಕೆ ಹೋಗಿ ಸ್ವತಃ ಜಿಲ್ಲಾಡಳಿತ ಹಾಗೂ ಮೈಸೂರು ಮಹಾಪೌರ ಭೈರಪ್ಪ ಆಹ್ವಾನ ನೀಡಿದ್ದರು.  ದಸರಾ ಉದ್ಘಾಟನೆಗೆಂದೇ ಇಂದು ಚನ್ನವೀರಕಣವಿಯವರು ನಗರಕ್ಕೆ ಆಗಮಿಸಿದ್ದು ಅವರ ಸ್ವಾಗತ ಕೋರಲು ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯ ತೋರಿದ್ದು ಮಹಾಪೌರ ಭೈರಪ್ಪ ಹಾಗೂ ಜಿಲ್ಲಾಧಿಕಾರಿ ರಂದೀಪ್ ಅವರ ಗೈರು ಹಾಜರಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

 

Leave a Reply

comments

Related Articles

error: