ಮೈಸೂರು

ಮೈಸೂರು ಜಿಲ್ಲೆಯಲ್ಲಿ ಇಂದು 202 ಜನರಿಗೆ ಕೋವಿಡ್ ಸೋಂಕು ದೃಢ

ಮೈಸೂರು, ಆ.24:- ಮೈಸೂರು ಜಿಲ್ಲೆಯಲ್ಲಿ ಇಂದು 202 ಜನರಿಗೆ ಕೋವಿಡ್ಸೋಂಕು ದೃಢಪಟ್ಟಿದ್ದು, ಕೆಲ ದಿನಗಳಲ್ಲಿ 25 ಸೋಂಕಿತರು ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ನಲ್ಲಿ ಪ್ರಕಟಿಸಲಾಗಿದೆ.
ಹೊಸ 202 ಪ್ರಕರಣ ಸೇರಿದಂತೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 12,598ಕ್ಕೆ ಏರಿಕೆಯಾಗಿದೆ. ಆದರೆ 2,240 ಸೋಂಕಿತರು ಡಿಸ್ಚಾರ್ಜ್ ಆಗಿರುವುದು ಸಮಾ ಧಾನಕರ ತಂದಿದೆ. ಇದರೊಂದಿಗೆ ಈವರೆಗೆ 9,542 ಮಂದಿ ಗುಣಮುಖರಾಗಿದ್ದಾರೆ. ಇನ್ನು ಕೇವಲ 2,711 ಜನರಲ್ಲಿ ಮಾತ್ರ ಸೋಂಕು ಸಕ್ರಿಯವಾಗಿದ್ದು, ಕೋವಿಡ್ ಆಸ್ಪತ್ರೆ ಹಾಗೂ ನಿಗಾ ಕೇಂದ್ರಗಳಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.
32 ವರ್ಷದ ಯುವಕ ಸೇರಿ 25 ಸೋಂಕಿತರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಆ.15ರಂದು 71 ವರ್ಷದ ವೃದ್ಧೆ, ಆ.16ರಂದು 73 ವರ್ಷದ ವೃದ್ಧ, ಆ.17ರಂದು 65 ವರ್ಷದ ವೃದ್ಧ, ಆ.18ರಂದು 48, 55, 60, 65, 75 ವರ್ಷದ ಮಹಿಳೆಯರು ಹಾಗೂ 32, 55, 74, 60, 60, 75, 80 ವರ್ಷದ ವ್ಯಕ್ತಿಗಳು, ಆ.20ರಂದು 53 ವರ್ಷದ ಮಹಿಳೆ, 70, 73 ವರ್ಷದ ವೃದ್ಧರು, ಆ.21ರಂದು 85 ವರ್ಷದ ವೃದ್ಧ, 57, 64, 77 ವರ್ಷದ ಮಹಿಳೆಯರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 345ಕ್ಕೆ ಏರಿಕೆಯಾಗಿದೆ. (ಕೆಎಸ್,ಎಸ್ಎಚ್)

Leave a Reply

comments

Related Articles

error: