ಮೈಸೂರು

ಸುದ್ದಿಗಳಲ್ಲಿ ನಿಖರತೆಯಿರಬೇಕು : ಈಚನೂರು ಕುಮಾರ್

ಸತ್ಯಕ್ಕೆ ಹತ್ತಿರವಾಗಿ ನಿಷ್ಟೆ, ಸ್ಪಷ್ಟತೆ, ನಿಖರತೆಯಿಂದ ಕೂಡಿದ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಬೇಕಿದೆ ಎಂದು ಹಿರಿಯ ಪತ್ರಕರ್ತ ಈಚನೂರು ಕುಮಾರ್ ತಿಳಿಸಿದರು.

ಮೈಸೂರಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಪತ್ರಿಕೆಗಳಲ್ಲಿನ ಸುದ್ದಿಗೆ ನಿಷ್ಟತೆಯಿರಬೇಕು ಎಂದರು. ಗಂಗೂಬಾಯಿ ಹಾನಗಲ್ ನ ಸಂಗೀತ ಮತ್ತು ಪ್ರದರ್ಶಕ ವಿವಿ ಕುಲಸಚಿವ ಪ್ರೊ. ನಿರಂಜನ ವಾನಳ್ಳಿ ಮಾತನಾಡಿ, ಪ್ರಾಶಸ್ತ್ಯ, ಸಕಾಲಿಕತೆ, ವಸ್ತು ನಿಷ್ಟತೆ, ಸತ್ಯ ಮತ್ತು ನಿಖರತೆಯೆಡೆಗೆ ಪತ್ರಿಕೆಗಳಿರಬೇಕು. ಆದರೆ, ಇಂದು ದೇಶದಲ್ಲಿ  ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಅರ್ಥ ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತ ಮಹೇಂದ್ರ, ಜೆಎಸ್‍ಎಸ್ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಲ್.ರವಿ ಮತ್ತಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: