ಮೈಸೂರು

ವಾಟರ್ ವಾಲ್ವ್ ಚೇಂಬರ್ ಗೆ ಉರುಳಿ ಬಿದ್ದ ಸ್ಕೂಟರ್: ಸವಾರ ಪಾರು

ಮೈಸೂರು,ಆ.25-ವಾಟರ್ ವಾಲ್ವ್ ಚೇಂಬರ್ ಗೆ ಸ್ಕೂಟರ್ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ರಾಜ್ ಕುಮಾರ್ ರಸ್ತೆಯಲ್ಲಿ ನಿನ್ನೆ ನಡೆದಿದೆ.

ಇಲ್ಲಿನ ಶಕ್ತಿನಗರದ ನಿವಾಸಿ ದೇವರಾಜು (59) ಎಂಬವರು ರಾತ್ರಿ 8 ಗಂಟೆಯಲ್ಲಿ ಯರಗನಹಳ್ಳಿ ಕಡೆಯಿಂದ ಸಾತಗಳ್ಳಿ ಕಡೆಗೆ ರಾಜ್ ಕುಮಾರ್ ರಸ್ತೆಯಲ್ಲಿ ಬರುವಾಗ ನಿಯಂತ್ರಣದ ತಪ್ಪಿ ಬಿಎಸ್ಎನ್ ಎಲ್ ಕಚೇರಿ ಸಮೀಪ ಸುಮಾರು ಆರು ಅಡಿ ಆಳದ ವಾಟರ್ ವಾಲ್ವ್ ಗುಂಡಿಯೊಳಗೆ ಸ್ಕೂಟರ್ ಉರುಳಿಬಿದ್ದಿದೆ. ಸವಾರ ದೇವರಾಜು ಗುಂಡಿಯ ಹೊರಗಡೆ ಬಿದ್ದಿದ್ದಾರೆ. ಸಣ್ಣಪುಟ್ಟ ಗಾಯಾಗಳಾಗಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆ ಎಎಸ್ಐ ರಾಜು, ಹೆಡ್ ಕಾನ್ ಸ್ಟೇಬಲ್ ಸೈಯದ್ ನೂರಿ ಅಕ್ಕ-ಪಕ್ಕದ ನಿವಾಸಿಗಳ ಸಹಾಯದಿಂದ ಗುಂಡಿಯೊಳಗೆ ಬಿದ್ದಿದ್ದ ಸ್ಕೂಟರ್ ಅನ್ನು ಮೇಲೆತ್ತಲಾಗಿದೆ. (ಎಚ್.ಎನ್, ಎಂ.ಎನ್)

 

 

 

 

Leave a Reply

comments

Related Articles

error: