ಮೈಸೂರು

ಸರ್ವೆ ಮಾಡಿರುವ ವಸತಿ ರಹಿತರ ಪಟ್ಟಿ ವೆಬ್ ಪೋರ್ಟಲ್ ನಲ್ಲಿ

ಮೈಸೂರು,ಆ.25:- ಶಾಸಕ, ಆಶ್ರಯ ವಸತಿ ಸಮಿತಿ ಅಧ್ಯಕ್ಷ ಎಸ್.ಎ. ರಾಮದಾಸ್ ಅವರ ನಿರ್ದೇಶನದಂತೆ ಆಶ್ರಯ ಯೋಜನೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ಸಭೆಯನ್ನು ಇಂದು ಮೈಸೂರು ಮಹಾನಗರ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಕೌನ್ಸಿಲ್ ಸಭಾಂಗಣದಲ್ಲಿ ವಸತಿ ಸಮಿತಿ ಸಭೆಯನ್ನು ನಡೆಸಲಾಯಿತು.
ಈ ದಿನ ನಡೆದ ಸಭೆಯಲ್ಲಿ ಒಟ್ಟಾರೆ 14 ವಿಷಯಗಳ ಬಗ್ಗೆ ಹಾಗೂ ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದ ಸಭೆಯು ಮುಖ್ಯವಾಗಿ ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
Housing For All (HFA)ಯೋಜನೆಯಡಿ ಈಗಾಗಲೇ ಸರ್ವೆ ಮಾಡಿರುವ ವಸತಿ ರಹಿತರ ಪಟ್ಟಿಯನ್ನು Web-portal “ ನಲ್ಲಿ ಪ್ರಕಟಣೆ ಮಾಡುವುದು, ಕೆ.ಆರ್ ಕ್ಷೇತ್ರದ ಲಲಿತಾದ್ರಿಪುರ ಗ್ರಾಮದ ಸರ್ವೆ ನಂ. 15, 16/1-3, 17, 18/2, 18/3, 18/4 ಜಮೀನಿನಲ್ಲಿ ಅನಧಿವೃತವಾಗಿ ನಿರ್ಮಿಸಿರುವ ಮನೆ/ ಶೆಡ್ಗಳನ್ನು ಕಾನೂನಾತ್ಮಕವಾಗಿ ತೆರವುಗೊಳಿಸಿ ಮತ್ತು ನಾಮಫಲಕವನ್ನು ಅಳವಡಿಸುವುದು, ಕೆ.ಆರ್ ಕ್ಷೇತ್ರದ ಲಲಿತಾದ್ರಿಪುರ ಗ್ರಾಮದ ಸರ್ವೆ ನಂ. 15, 16/1-3, 17, 18/2, 18/3, 18/4 ಮೀಸಲಿರುವ 13 ಎಕರೆ 05 ಗುಂಟೆ ಜಮೀನನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಳ್ಳುವ ಕುರಿತು, ಕೆ.ಆರ್ ಕ್ಷೇತ್ರದ ಲಲಿತಾದ್ರಿಪುರ ಗ್ರಾಮದ ಸರ್ವೆ ನಂ. 15, 16/1-3, 17, 18/2, 18/3, 18/4 ಮೀಸಲಿರುವ 13 ಎಕರೆ 05 ಗುಂಟೆ ಜಾಗದಲ್ಲಿ S+9 ಮಾದರಿಯಲ್ಲಿ ಗುಂಪು ಮನೆಗಳನ್ನು ನಿರ್ಮಿಸುವ ಸಂಬಂಧ ವಿಸ್ತೃತ ಡಿ.ಪಿ.ಆರ್ ವರದಿಯನ್ನು ಈಗಾಗಲೇ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆಗೆ ಸಲ್ಲಿಸಲಾಗಿದ್ದು, ಸಂಬಂಧಪಟ್ಟವರಿಂದ ಅನುಮೋದನೆ ಪಡೆದು ಮುಂದಿನ ಕ್ರಮ ವಹಿಸುವ ಕುರಿತು, ಕೆ.ಆರ್. ಕ್ಷೇತ್ರದ ಲಲಿತಾದ್ರಿಪುರದ ನವೀಕರಿಸಿದ ಡಿ.ಪಿ.ಆರ್ ಗೆ ಅನುಗುಣವಾಗಿ S+9 ಮಾದರಿಯ ಎ.ಹೆಚ್.ಪಿ ಮನೆಗಳ 1 ಬಿ.ಹೆಚ್.ಕೆ ಮತ್ತು 2 ಬಿ.ಹೆಚ್.ಕೆ ಮನೆಗಳಿಗೆ ಯೂನಿಟ್ ಕಾಸ್ಟ್ ಬರಿಸುವ ವಿಧಾನದ ಕುರಿತು ಕೆ.ಆರ್ ಕ್ಷೇತ್ರದ ಕೆಲಸ ಕಾರ್ಯಗಳಿಗೆ, ಫಲಾನುಭವಿಗಳ ಆಧಾರ್ ಕಾರ್ಡ್ ಲಿಂಕ್ ಮಾಡಲು ಮತ್ತು ಕಡತಗಳನ್ನು ಗಣತೀಕೃತಗೊಳಿಸಲು 05 ಜನ ಡಾಟಾ ಎಂಟ್ರಿ ಆಪರೇಟರ್ ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜನೆ ಮಾಡಲು ಪ್ರಕಟಣೆ ಹೊರಡಿಸಿ ನೇಮಕ ಮಾಡಿಕೊಳ್ಳುವ ಕುರಿತು, ಕಾನೂನು ತಜ್ಞರು (ವಕೀಲರನ್ನು ) ನೇಮಿಸುವ ಕುರಿತು ಉತ್ತಾರಾಧಿಮಠದ ರಸ್ತೆಯಲ್ಲಿರುವ ಕೆ.ಆರ್. ಕ್ಷೇತ್ರದ ಆಶ್ರಯ ಕಛೇರಿಯ ದುರಸ್ಥಿ / ನವೀಕರಣದ ಕುರಿತು, ಕೆ.ಆರ್ ಕ್ಷೇತ್ರದ ಆಶ್ರಯ ವಸತಿ ಯೋಜನೆಯ ಗೊರೂರು ಬಡಾವಣೆಯ ಬ್ಲಾಕ್ 04 ನಲ್ಲಿ ವಿದ್ಯುತ್ ಸರಬರಾಜು ನೀಡುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಗುರುದತ್ ಹೆಗಡೆ, ಹೆಚ್ಚುವರಿ ಉಪ ಆಯುಕ್ತರಾದ ಶಶಿಕುಮಾರ್ , ಸೂಪರ್ಡೆಂಟ್ ಬಿಳಿಗಿರಿ , ಕಾರ್ಯಪಾಲಕ ಅಭಿಯಂತರರಾದ ರಂಗಯ್ಯ , ಕೌನ್ಸಿಲ್ ಕಾರ್ಯದರ್ಶಿಗಳಾದ ರಂಗಸ್ವಾಮಿ , ಎಸ್.ಬಿ.ಐ. ಬ್ಯಾಂಕ್(ಹೌಸಿಂಗ್) ಎ.ಜಿ.ಎಂ ಆದ ರಾಘವೇಂದ್ರ ಪ್ರತಾಪ್ ಸಿಂಹ , ಆಶ್ರಯ ವಿಭಾಗದ ನೊಡಲ್ ಅಧಿಕಾರಿ ಸತ್ಯಮೂರ್ತಿ , ಆಶ್ರಯ ಸಮಿತಿ ಸದಸ್ಯರುಗಳಾದ ವಿದ್ಯಾ ಅರಸ್, ಗೌರಿ, ಹೇಮಂತ್ ಕುಮಾರ್ ಮತ್ತು ಹನ್ಸರಾಜ್ ಆಶ್ರಯ ಭಾಗಕ್ಕೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. (ಜಿ.ಕೆ)

Leave a Reply

comments

Related Articles

error: