ಮೈಸೂರು

ನಿಶ್ಚಿತಾರ್ಥದ ಮನೆಯಲ್ಲಿ 4,15,000 ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಯುವತಿಯ ಬಂಧನ

ಮೈಸೂರು,ಆ.26:- ಮೈಸೂರು ನಗರದ ಕುಂಬಾರಕೊಪ್ಪಲಿನ ಸುಭಾಷ್ನಗರದ ವಾಸಿ ರಮೇಶ್ ಎಂಬವವರ ಮನೆಯಲ್ಲಿ ಅವರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಮಗಳು ಚಿನ್ನಾಭರಣಗಳನ್ನು ಧರಿಸಿದ್ದು, ಕಾರ್ಯಕ್ರಮ ಮುಗಿದ ನಂತರ ಅವುಗಳನ್ನು ಮನೆಯಲ್ಲಿಯೇ ಬಿಚ್ಚಿ ಅಲ್ಮೇರಾದಲ್ಲಿ ಇಟ್ಟಿದ್ದು, ಅದೇ ದಿವಸ ಸಂಜೆ ನೆಂಟರೆಲ್ಲಾ ಮನೆಯಿಂದ ಹೋದ ಮೇಲೆ ಅಲ್ಮೇರಾದಲ್ಲಿದ್ದ ಒಡವೆಗಳನ್ನು ನೋಡಲಾಗಿ ಅವುಗಳು ಕಾಣೆಯಾಗಿತ್ತು. ಈ ಕುರಿತು ಮೇಟಗಳ್ಳಿ ಠಾಣೆಗೆ ದೂರು ನೀಡಿ ಪ್ರಕರಣವನ್ನು ದಾಖಲಿಸಿದ್ದರು.
ಈ ಪ್ರಕರಣದ ತನಿಖೆ ಕೈಗೊಂಡ ಮೇಟಗಳ್ಳಿ ಪೊಲೀಸರು 25.08.2020 ರಂದು ಮಾಹಿತಿ ಮೇರೆಗೆ ಈ ದಿನದಂದು ಕಾರ್ಯಕ್ರಮದಲ್ಲಿ ರಮೇಶ್ ಮನೆಗೆ ಬಂದಿದ್ದ ಅವರ ಮಗಳ ಪರಿಚಿತಳಾದ ಅಶ್ರಿತಾ(21) ರಾಮಕೃಷ್ಣೇಗೌಡ ಅವರ ಮಗಳು, ಸುಭಾಷ್ನಗರ, ಕುಂಬಾರಕೊಪ್ಪಲು, ಮೈಸೂರು ನಗರ ಎಂಬುವವರನ್ನು ವಿಚಾರಣೆಗೊಳಪಡಿಸಿದಾಗ ಈಕೆ ಒಡವೆಗಳನ್ನು ಕದ್ದುಕೊಂಡು ತನ್ನ ಮನೆಯಲ್ಲಿಟ್ಟು ಕೊಂಡಿರುವುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆಕೆಯನ್ನು ಬಂಧಿಸಿ, 4,15,000 ರೂ. ಬೆಲೆಬಾಳುವ 85 ಗ್ರಾಂ ತೂಕದ ಎರಡು ನಕ್ಲೇಸ್ಗಳು ಮತ್ತು ಒಂದು ಜೊತೆ ಓಲೆಯನ್ನು ವಶಪಡಿಸಿಕೊಂಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ (ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ) ಗೀತಪ್ರಸನ್ನ ಹಾಗೂ ನರಸಿಂಹರಾಜ ವಿಭಾಗದ ಎ.ಸಿ.ಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಠಾಣೆಯ ಇನ್ಸ್ಪೆಕ್ಟರ್ ಎ ಮಲ್ಲೇಶ್, ಪಿಎಸ್ಐ ವಿಶ್ವನಾಥ್, ಎಎಸ್ಐ ಪೊನ್ನಪ್ಪ ಸಿಬ್ಬಂದಿಗಳಾದ ಲಿಂಗರಾಜಪ್ಪ, ದಿವಾಕರ್, ಕೃಷ್ಣ, ಆಶಾ ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: