ಮೈಸೂರು

ಡಾ. ಎಚ್ಚೆಸ್ಕೆ ಸಾಹಿತ್ಯದ ಸವ್ಯಸಾಚಿ : ಡಾ. ವೈ. ಡಿ.ರಾಜಣ್ಣ ಬಣ್ಣನೆ

ಮೈಸೂರು, ಆ.26:- ಡಿಟಿಎಸ್ ಫೌಂಡೇಷನ್ ವತಿಯಿಂದ ಖ್ಯಾತ ಅಂಕಣಕಾರರು ಹಾಗೂ ಸಾಹಿತಿಗಳಾದ ‘ಡಾ.ಎಚ್ಚೆಸ್ಕೆರವರ ಜನ್ಮಶತಮಾನೋತ್ಸವದ ಅಂಗವಾಗಿ
ಚಾಮುಂಡಿಪುರಂ ವೃತ್ತದಲ್ಲಿ ಇರುವ ತಗಡೂರು ರಾಮಚಂದ್ರ ಉದ್ಯಾನವನದಲ್ಲಿ ಇಂದು ‘ಡಾ.ಎಚ್ಚೆಸ್ಕೆಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ವೈ ಡಿ ರಾಜಣ್ಣ ಎಚ್ಚೆಸ್ಕೆ ಅವರು ಕವಿಯಾಗಿ. ವಿಮರ್ಶಕರಾಗಿ ಪತ್ರಕರ್ತರಾಗಿ ಚಿಂತಕರಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಡಾ.ಎಚ್ಚೆಸ್ಕೆ ಸಾಹಿತ್ಯದ ಸವ್ಯಸಾಚಿ.ಅವರ ಹೆಚ್ಚುಗಾರಿಕೆ ಎಂದರೆ ಆರು ದಶಕಗಳ ಅವರ ಅಂಕಣ ಗಾರಿಕೆ,ಅವರು ಶ್ರೇಷ್ಠ ಅಂಕಣಗಳನ್ನು ಬರೆದು ರಮ್ಯಾ ರೂವಾರಿ ಅಂಕಣಕಾರ ಎಂದು ಗುರುತಿಸಿಕೊಂಡರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ. ಸಾಹಿತಿ ಡಾ. ವೈ ಡಿ ರಾಜಣ್ಣ ಬಣ್ಣಿಸಿದರು.
‘ಡಾ.ಎಚ್ಚೆಸ್ಕೆ ಸಾಹಿತ್ಯದ ಸಾಧಕರಾಗಿದ್ದು ಮೂಲತಃ ಅರ್ಥಶಾಸ್ತ್ರಜ್ಞರಾದ ‘ಡಾ.ಎಚ್ಚೆಸ್ಕೆ ಅರ್ಥಶಾಸ್ತ್ರ ವಾಣಿಜ್ಯಶಾಸ್ತ್ರ ಗಳಂತಹ ಅನನ್ಯ ಕೃತಿಗಳ ಸಂಪಾದಕರಾಗಿಯೂ ವಾಣಿಜ್ಯಶಾಸ್ತ್ರದಲ್ಲಿ ಕನ್ನಡ ಭಾಷೆಯನ್ನು ಬೆಳಗಿಸಿದ್ದಾರೆ. ಡಾ.ಎಚ್ಚೆಸ್ಕೆ ಕನ್ನಡದ ವಿಶ್ವಕೋಶ, ನಿಘಂಟು ರಚನೆಯಲ್ಲಿ ಕ್ರಮ ಅಧ್ಯಯನ ಶ್ರಮ ಪರಿಶ್ರಮದ ಮೂಲಕ ಕನ್ನಡದ ಶ್ರೇಷ್ಠ ಕೆಲಸ ಮಾಡಿದ್ದಾರೆ ಎಂದರು.
‘ಡಾ.ಎಚ್ಚೆಸ್ಕೆಎನ್ನುವಷ್ಟರ ಮಟ್ಟಿಗೆ ಅಂದುಕೊಂಡ ಭವ್ಯತೆಯನ್ನು ಮಹತ್ವವನ್ನು ಕಂಡು ಕೊಟ್ಟವರು ‘ಡಾ.ಎಚ್ಚೆಸ್ಕೆ,
ಅವರ ಸಾಹಿತ್ಯದ ಸಾರ್ಥಕ ಸಾಧನೆ ಹಾಗೂ ಅವರ ಆಳವಾದ ಅಧ್ಯಯನ ಮತ್ತು ಅಭಿವ್ಯಕ್ತಿ ಎಂದಿಗೂ ಅಗ್ರಪಂಕ್ತಿಯಲ್ಲಿ ನಿಲ್ಲುವಂಥದ್ದು ,ಈ ಕಾರಣಕ್ಕಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ‘ಡಾ.ಎಚ್ಚೆಸ್ಕೆ ಗ್ರಂಥಾಲಯ ಆರಂಭಕ್ಕೆ ಸಿದ್ಧತೆ ನಡೆಸಿದ್ದು
ಬಹುತೇಕ ಪೂರ್ಣಗೊಂಡಿದೆ.ಕನ್ನಡ ರಾಜ್ಯೋತ್ಸವದ ಸಂದರ್ಭಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಡಿಟಿಎಸ್ ಫೌಂಡೇಶನ್ ಅಧ್ಯಕ್ಷರಾದ ಡಿಟಿ ಪ್ರಕಾಶ್ ಮಾತನಾಡಿ ಮುಂದಿನ ದಿನಗಳಲ್ಲಿ ಅರ್ಥಪೂರ್ಣವಾಗಿ ಜನ್ಮಶತಮಾನೋತ್ಸವ ಕಾರ್ಯಕ್ರಮ ನಡೆಸಲಾಗುವುದು. ಅವರ ಅಪರೂಪದ ಕೃತಿಗಳನ್ನು ಮುದ್ರಣ ರೂಪದಲ್ಲಿ ತರಲಾಗುವುದು ಎಂದು ತಿಳಿಸಿದರು.
ಹಾಗೆ ಮೈಸೂರಿನ ಪ್ರಮುಖ ರಸ್ತೆಗೆ ಇಲ್ಲವಾದರೆ ಪ್ರಮುಖ ಉದ್ಯಾನವನದಲ್ಲಿ ‘ಡಾ.ಎಚ್ಚೆಸ್ಕೆ ಹೆಸರು ಇಡಬೇಕೆಂದು ಮುಂದಿನ ದಿನಗಳಲ್ಲಿ ನಗರ ಪಾಲಿಕೆಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭ ರಾಜ್ಯ ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ಡಾ.ಎಂ ಜಿ ಆರ್ ಅರಸ್ ,ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ.ಡಿ ಪಾರ್ಥಸಾರಥಿ ,ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜ ಬಸಪ್ಪ ,ಅಪೂರ್ವ ಸುರೇಶ್, ವಿಕ್ರಂ ಅಯ್ಯಂಗಾರ್,ರಾಕೇಶ್ ಭಟ್ , ಕಡಕೊಳ ಜಗದೀಶ್ ,ಸುಚೀಂದ್ರ, ಚಕ್ರಪಾಣಿ, ಪಾಂಡು ,ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: