ಮೈಸೂರು

ಮೃಗಾಲಯದ ಪ್ರಾಣಿ-ಪಕ್ಷಿ ದತ್ತು ಸ್ವೀಕಾರ

ಮೈಸೂರು.ಆ.27:- ಮೈಸೂರು ಮೃಗಾಲಯದ “ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ” ಅಡಿಯಲ್ಲಿ ಹಲವು ಪ್ರಾಣಿಪ್ರಿಯರು ಪ್ರಾಣಿಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದಾರೆ.
ಮೈಸೂರಿನ ಮಾಸ್ಟರ್ ತಕ್ಷ್ (ಹೊನ್ನಸಿರಿ ಗ್ರೂಪ್) ಇವರು 1 ಲಕ್ಷ ರೂ. ಪಾವತಿಸಿ ಮೃಗಾಲಯದ “ಹೈಬ್ರಿಡ್ ಸಿಂಹ”, ಸ್ಪಂದನ ಕೆ. ಎಂಬವರು 1 ಸಾವಿರ ರೂ. ಪಾವತಿಸಿ ಲವ್ ಬರ್ಡ್, ಹರೀಶ್ ಎನ್.ಜಿ ಎಂಬವರು 2 ಸಾವಿರ ರೂ. ಪಾವತಿಸಿ ಮ್ಯಾಂಡರಿನ್ ಡಕ್, ಮೊಹಮ್ಮದ್ ಅರ್ಹಮ್ ಎಂಬವರು 1 ಸಾವಿರ ರೂ. ಪಾವತಿಸಿ ಕಾಕಟೈಲ್ ಹಾಗೂ ಮಾಸ್ಟರ್ ಆಯುಷ್ ಕೃಷ್ಣನ್ ಅರುಣ್ ಎಂಬವರು 1 ಸಾವಿರ ರೂ. ಪಾವತಿಸಿ ಲವ್ಬರ್ಡ್ ಅನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿರುತ್ತಾರೆ.
ಪ್ರಾಣಿಗಳನ್ನು ದತ್ತು ಪಡೆದು ಮೃಗಾಲಯ ನಿರ್ವಹಣೆಗೆ ಹಾಗೂ ಪ್ರಾಣಿಗಳ ಸಂರಕ್ಷಣೆಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿರುವುದಾಗಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜಿತ್ ಕುಲಕರ್ಣಿ ಅವರು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: