ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ 8,580 ಹೊಸ ಕೊರೊನಾ ಪ್ರಕರಣ: 3 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ; 7,249 ಮಂದಿ ಗುಣಮುಖ

ಬೆಂಗಳೂರು,ಆ.27-ರಾಜ್ಯದಲ್ಲಿ ನಿನ್ನೆ 8,580 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ಗಡಿ ದಾಟಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3,00406ಕ್ಕೆ ಏರಿಕೆಯಾಗಿದೆ. ಅಲ್ಲದೆ, 133 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಮೃತರ ಸಂಖ್ಯೆ 5,091ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರ 3,284, ಮೈಸೂರು 951, ಬಳ್ಳಾರಿ 510, ದಕ್ಷಿಣಕನ್ನಡ 314, ಬೆಳಗಾವಿ 289, ಧಾರವಾಡ 255, ಉಡುಪಿ 251, ದಾವಣಗೆರೆ 233, ಕಲಬುರಗಿ 180, ಶಿವಮೊಗ್ಗ 166, ಹಾವೇರಿ 164, ಕೊಪ್ಪಳ 158, ಮಂಡ್ಯ 155, ಬಾಗಲಕೋಟೆ, ಹಾಸನ ತಲಾ 154, ಬೆಂಗಳೂರು ಗ್ರಾಮಾಂತರ, ರಾಯಚೂರು ತಲಾ 136, ವಿಜಯಪುರ 131, ಉತ್ತರಕನ್ನಡ 129, ಗದಗ 124, ಯಾದಗಿರಿ 102, ಚಿಕ್ಕಮಗಳೂರು 97, ಕೋಲಾರ, ತುಮಕೂರು ತಲಾ 88, ಚಿಕ್ಕಬಳ್ಳಾಪುರ 87, ಚಿತ್ರದುರ್ಗ 78, ಚಾಮರಾಜನಗರ 51, ರಾಮನಗರ 47, ಬೀದರ್ 42, ಕೊಡಗು 26 ಪ್ರಕರಣಗಳು ವರದಿಯಾಗಿವೆ.

ನಿನ್ನೆ 7,249 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದ ಇದುವರೆಗೂ ಗುಣಮುಖರಾದವರ ಸಂಖ್ಯೆ 2,11,688ಕ್ಕೆ ಏರಿದೆ. ರಾಜ್ಯದಲ್ಲಿ 83,608 ಸಕ್ರಿಯ ಪ್ರಕರಣಗಳಿವೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: