ಕರ್ನಾಟಕಮೈಸೂರು

ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವ ‘ಏ.5’ಕ್ಕೆ

ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಕಿರೀಟಧಾರಣ ಉತ್ಸವವು ಏ.5ರ ಬುಧವಾರದಂದು ನಡೆಯಲಿದೆ.

ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವವು 10 ದಿನಗಳ ಕಾಲ ನಡೆಯಲಿದ್ದು, 4ನೇ ದಿನದಂದು ಮೈಸೂರು ಮಹಾಸಂಸ್ಥಾನದಿಂದ ಶ್ರೀಸ್ವಾಮಿಗೆ ಅರ್ಪಿಸಿದ ಅಪರೂಪ ಹರಳುಗಳಿಂದ ತಯಾರಿಸಿದ ಕಿರೀಟ ಧಾರಣೆ ನಡೆಸಲಾಗುವುದು, 7ನೇ ದಿನ ರಥೋತ್ಸವ ನಡೆಯುವುದು.

ಲಕ್ಷಾಂತರ ಭಕ್ತ ಜನರು ಸ್ವಾಮಿಗೆ ಕಿರೀಟಧಾರಣೆ ಮಾಡುವ ಅಪರೂಪದ ಕ್ಷಣವನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ.

ವೈರಮುಡಿ ಕಿರೀಟವನ್ನು ಸಾಕ್ಷಾತ್ ಮಹಾವಿಷ್ಣುವಿನ ಕಿರೀಟವೆನ್ನುವುದು ಇತಿಹಾಸದ ಪ್ರತೀತಿ, ರಾಜಮುಡಿ ಕಿರೀಟ ಮೈಸೂರು ಮಹಾಸಂಸ್ಥಾನದ ರಾಜರಾದ  ರಾಜ ಒಡೆಯರ್ ಸ್ವಾಮಿಗೆ ಅರ್ಪಿಸಿದ್ದರು, ಕಿರೀಟದಲ್ಲಿ ಪಚ್ಚೆ, ಮಾಣಿಕ್ಯ, ವಜ್ರಗಳು ಸೇರಿದಂತೆ ಅಪರೂಪದ ಅತಿ ಬೆಲೆಬಾಳುವ ಹರಳುಗಳಿವೆ. ವಿಶೇಷ ದಿನಗಳಲ್ಲಿ  ಮುಡಿಕಿರೀಟ ಹಾಗೂ ಮುತ್ತಿನಹಾರಗಳಿಂದ  ಸಿಂಗರಿಸಿದ ಚೆಲುವ ನಾರಾಯಣ ಸ್ವಾಮಿಯ ಚೆಲುವನ್ನು ವರ್ಣಿಸಲು ಪದಗಳೆ ನಿಲುಕುವುದಿಲ್ಲ. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: