ಕ್ರೀಡೆಪ್ರಮುಖ ಸುದ್ದಿ

ಖ್ಯಾತ ಶಟ್ಲರ್ ಹಾಗೂ ಅರ್ಜುನ ಪುರಸ್ಕೃತ ಸಾತ್ವಿಕ್ ಸಾಯಿರಾಜ್‌ಗೆ ಕೋವಿಡ್

ದೇಶ(ನವದೆಹಲಿ) ಆ.28:- ಭಾರತದ ಖ್ಯಾತ ಶಟ್ಲರ್ ಹಾಗೂ ಅರ್ಜುನ ಪುರಸ್ಕೃತ ಸಾತ್ವಿಕ್ ಸಾಯಿರಾಜ್‌ಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
20 ರ ಹರಯದ ಡಬಲ್ಸ್‌ ಆಟಗಾರ ಸಾತ್ವಿಕ್ ಅವರಿಗೆ ಲಕ್ಷಣರಹಿತ ಸೋಂಕು ತಗುಲಿದ್ದು, ಅವರನ್ನು ಕಳೆದ ಒಂದು ವಾರದಿಂದ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಹೈದರಾಬಾದ್ ಸಮೀಪದ ಅಮಲಾಪುರಂನಲ್ಲಿರುವ ತಮ್ಮ ಮನೆಯಲ್ಲಿಯೇ ಅವರು ಕ್ವಾರಂಟೈನ್ ಆಗಿದ್ದು ಖುದ್ದು ಅವರೇ ಈ ಕುರಿತು ಮಾಹಿತಿ ನೀಡಿದ್ದಾರೆ.

ಕಳೆದವಾರ ಆ್ಯಂಟಿಜೆನ್ ಟೆಸ್ಟ್‌ ಮಾಡಿಸಿಕೊಂಡಾಗ ಸೋಂಕು ಇರುವುದು ತಿಳಿದಿತ್ತು. ಐದು ದಿನಗಳಿಂದ ಪ್ರತ್ಯೇಕವಾಸದಲ್ಲಿದ್ದೇನೆ. ಆರ್‌ಟಿ-ಪಿಸಿಆರ್‌ ಟೆಸ್ಟ್ ನಲ್ಲಿಯೂ ಸೋಂಕು ಖಚಿತಪಟ್ಟಿದೆ. ನಾನು ಔಷಧೋಪಚಾರ ಪಡೆಯುತ್ತಿದ್ದೇನೆ. ಇಲ್ಲಿಯವರೆಗೆ ಯಾವುದೇ ಲಕ್ಷಣಗಳೂ ಕಂಡುಬಂದಿಲ್ಲ. ನನ್ನ ಪಾಲಕರು ಮತ್ತು ಸ್ನೇಹಿತರಲ್ಲಿಯೂ ವೈರಸ್‌ ಸೋಂಕು ಕಂಡುಬಂದಿಲ್ಲ. ಆದರೂ ನನಗೆ ಎಲ್ಲಿಂದ ಸೋಂಕು ತಗುಲಿತು ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: