ಕರ್ನಾಟಕಕ್ರೀಡೆಮೈಸೂರು

ಕೆ.ಪಿ.ಎಲ್ ಕ್ರಿಕೆಟ್ ಸೆಮಿಪೈನಲ್ ನಡೆಗೆ ಬೆಳಗಾವಿ ಪ್ಯಾಂಥರ್ಸ್

ಹುಬ್ಬಳ್ಳಿ :
mayank-agarwal-scored-webಸೈಕಲ್ ಪ್ಯೂರ್ ಅಗರಬತ್ತಿ ಪ್ರಾಯೋಜಕತ್ವದಲ್ಲಿ ಜರುಗುತ್ತಿರುವ ಕಾರ್ಬನ್ ಮೊಬೈಲ್ ಟಿ.20  ಕೆ.ಪಿ.ಎಲ್ ಕ್ರೀಡೆ ಪಂದ್ಯಾವಳಿ, ಹುಬ್ಬಳ್ಳಿಯ ರಾಜ್‍ನಗರದ ಕೆ.ಎಸ್.ಸಿಎ ಕ್ರೀಡಾಂಗಣದಲ್ಲಿ ನಡೆದ ರಾಕ್ಟ್ ಸ್ಟಾರ್ಸ್ ತಂಡವನ್ನು ಪರಾಭವಗೊಳಿಸುವುದರೊಂದಿಗೆ ಬೆಳಗಾವಿ ಪ್ಯಾಂಥರ್ಸ್ ತಂಡವು ಸೆಮಿಪೈನಲ್ ಗೆ ದಾಪುಗಾಲು ಹಾಕಿದೆ.
ಬೆಳಗಾವಿ  ಪ್ಯಾಂಥರ್ಸ್ ತಂಡವು ರಾಕ್ ಸ್ಟಾರ್ಸ್ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿ ಸೈಮಿ ಪೈನಲ್ ನತ್ತ ತನ್ನ ಹೆಜ್ಜೆಗಳನ್ನು ದೃಢಗೊಳಿಸಿಕೊಂಡಿತು. ಮಳೆಯಿಂದ 40 ನಿಮಿಷಗಳ ಕಾಲ ವಿಳಂಬವಾದ ಪಂದ್ಯದಲ್ಲಿ ಬೆಳಗಾವಿ ಫ್ಯಾಂರ್ಥಸ್ ತಂಡವು ಮೊದಲಿಗೆ ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿತ್ತು.
ರಾಕ್ ಸ್ಟಾರ್ಸ್ ತಂಡ 18  ಓವರ್ ಗೆ 9 ವಿಕೆಟ್ ನಷ್ಟಕ್ಕೆ ಕೇವಲ 87 ರನ್ ಗಳಿಸಿತು. ತಂಡದ ಪರ ರಾಜೀವ್ 24, ಆರ್.ಗೌಡ 19 ಹಾಗೂ ಎಲ್.ಎಲ್ ಅಕ್ಷಯ್ 14 ರನ್ ಗಳಿಸಿದರು. ಪ್ಯಾಂಥರ್ಸ್ ಪರ ಬೌಲಿಂಗ್ ನಲ್ಲಿ ಎಸ್.ಭಾರಧ್ವಾಜ್ 3 ಎಸ್.ಶಿಂಧೆ,ಸಿ.ಕೆ.ಅಕ್ಷಯ್ ಹಾಗೂ ಪಿ.ದುಬೆ ತಲಾ 2 ವಿಕೆಟ್ ಪಡೆದರು.  88 ಸುಲಭ ಮೊತ್ತವನ್ನು ಬೆನ್ನಟ್ಟಿದ ಬೆಳಗಾವಿ ಪ್ಯಾಂಥರ್ಸ್ ಕೇವಲ 8 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ  91 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು. ತಂಡದ ಬ್ಯಾಟ್ಸ್ ಮನ್ ಮಯಾಂಕ್ ಅಗರ್ ವಾಲ್ ಅಜೇಯ 66 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಎಂ.ಕೆ.ಅಬ್ಬಾಸ್ 19 ರನ್ ಗಳಿಸಿದರು. ಪ್ಯಾಂಥರ್ಸ್ ಮಯಾಂಕ್ ಅಗರ್ ವಾಲ್ ಪಂದ್ಯಶೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್ ವಿವರ :
ರಾಕ್ ಸ್ಟಾರ್ಸ್ 18 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 87 ರನ್, (ವಿಹಾನ್ ರಾಜೀವ್-24, ರಾಜು ಗೌಡ -19, ಸತೀಶ್ ಬಾರಧ್ವಾಜ್ 3/12, ಎಸ್.ಸಚಿನ್ 2/32, ಪ್ರವೀಣ್ ಡುಬೇ 2/16.) ಬೆಳಗಾವಿ ಪ್ಯಾಂಥರ್ಸ್ 8 ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿ ವಿಜೇತರಾದರು. ಮಯಾಂಕ್  ಅಗರ್ ವಾಲ್ 66, ರನ್ ಕುನ್ಹೈನ್ ಅಬಾಸ್ 19
ತಂಡ
ಪಂಧ್ಯ
ಗೆಲುವು
ಸೋಲು
ಟೈ
ಎನ್.ಆರ್.
ಪಿಟಿಎಸ್.
ಎನ್.ಆರ್.ಆರ್.
ಮೈಸೂರು ವಾರಿಯರ್ಸ್
5
5
0
0
0
10
+1.971
ಹುಬ್ಬಳ್ಳಿ ಬುಲ್ಸ್
5
4
1
0
0
8
+0.329
ಬಳ್ಳಾರಿ ಟಸ್ಕರ್ಸ್
6
3
4
1
0
7
+1.351
ನಮ್ಮ ಶಿವಮೊಗ್ಗ
6
3
3
0
0
6
-0.593
ಬೆಳಗಾವಿ ಪ್ಯಾಂಥರ್ಸ್
6
3
3
0
0
6
+0.537
ಮಂಗಳೂರು ಯುನೈಟೆಡ್
6
1
4
0
1
3
-0.110
ರಾಕ್ ಸ್ಟಾರ್ಸ್
6
0
6
0
0
0
-3.716
ಆರೇಂಜ್ ಕ್ಯಾಪ್  : ಆರ್. ಸಮರ್ಥ್
ಪರ್ಪಲ್ ಕ್ಯಾಪ್ : ಪಿ.ಡುಬೇ
ಇಂದಿನ ಪಂದ್ಯಗಳು :  ಬಿಜಾಪುರ ಬುಲ್ಸ್ vs ಬಳ್ಳಾರಿ ಟಸ್ಕರ್ಸ್ ಮತ್ತು ಮಂಗಳೂರು ಯುನೈಟೆಡ್ vs ಬೆಳಗಾವಿ ಪ್ಯಾಂಥರ್ಸ್.

Leave a Reply

comments

Related Articles

error: