ಮೈಸೂರು

ಚುನಾವಣಾ ಆಯೋಗದ ನಿಯಮ ಪಾಲಿಸದ ಮಲ್ಲಿಕಾರ್ಜುನ್ ಖರ್ಗೆ

ನಂಜನಗೂಡು ಉಪಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂಸದ ಮಲ್ಲಿಕಾರ್ಜುನ್ ಖರ್ಗೆ ವಾಪಸ್ ತೆರಳುವಾಗ ನಂಜನಗೂಡು ಚೆಕ್ ಪೋಸ್ಟ್ ಬಳಿ ಕಾರನ್ನು ತಪಾಸಣೆ ನಡೆಸಲು ಅಧಿಕಾರಿಗಳು ಕೈ ಮುಂದೆ ಮಾಡಿದಾಗ ಅಧಿಕಾರಿಗಳ ಮಾತಿಗೆ ಬೆಲೆ ನೀಡದೆ ಕಾರನ್ನು ಮುನ್ನುಗ್ಗಿಸಿದ್ದಾರೆ ಎನ್ನಲಾಗಿದೆ.

ಚುನಾವಣಾ ಆಯೋಗದ  ನಿಯಮದಂತೆ ಅಧಿಕಾರಿಗಳು  ಕಾರು ತಪಾಸಣೆ ನಡೆಸಲು ಹೇಳಿದರೂ ನಿಲ್ಲಿಸದೇ ವೇಗವಾಗಿ ತೆರಳಿದ್ದಾರೆ. ನಂಜನಗೂಡು ಚೆಕ್ ಪೋಸ್ಟ್ ನಲ್ಲಿ  ಖರ್ಗೆಯವರ  ಕಾರನ್ನು ಸಿಬ್ಬಂದಿಗಳು ಅಡ್ಡ ಹಾಕಿದ್ದರು. ಚಾಲಕ ವೇಗವಾಗಿ ಕಾರನ್ನು ಓಡಿಸುತ್ತಿದ್ದರೂ ಖರ್ಗೆಯವರು ನಿಲ್ಲಿಸುವಂತೆ ಸೂಚಿಸಿಲ್ಲ ಎನ್ನಲಾಗಿದೆ. ಈ ಮೂಲಕ ಚುನಾವಣಾ ಆಯೋಗಕ್ಕೆ ಸಹಕರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಾರಿನಲ್ಲಿ ಏನೋ ಇದ್ದಿರಬಹುದೇನೋ ಅದಕ್ಕೆ ನಿಲ್ಲಿಸಿಲ್ಲ ಎಂಬ ಅನುಮಾನಗಳು  ಹುಟ್ಟಿಕೊಳ್ಳುತ್ತಿವೆ ಎನ್ನಲಾಗಿದೆ. ಮತ್ತೊಂದೆಡೆ ಇದೇ ಚೆಕ್ ಪೋಸ್ಟ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ವಾಹನಗಳನ್ನು ತಪಾಸಣೆ ನಡೆಸಲಾಯಿತು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: