ಮೈಸೂರು

ಸ್ವಾಸ್ಥ್ಯ ದೇಹ ಮತ್ತು ಸ್ವಾಸ್ಥ್ಯ ಮನಸ್ಸಿಗಾಗಿ ಯೋಗ ಅವಶ್ಯ : ಕೆ.ಎಸ್.ರಘುರಾಮಯ್ಯ

ಮೈಸೂರು ಯೋಗ ಶಾಲಾ ವತಿಯಿಂದ ಭಾನುವಾರ ಮೈಸೂರು ಪತ್ರಕರ್ತರ ಭವನದಲ್ಲಿ ‘ವ್ಯಕ್ತಿತ್ವ ವಿಕಸನ ಮಾರ್ಗಸೂಚಿ’ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಾರ್ಗಸೂಚಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಮಾಜ ಸೇವಕ ಕೆ.ಎಸ್.ರಘುರಾಮಯ್ಯ ವಾಜಪೇಯಿ, ಯೋಗ ಪ್ರಾಚೀನ ವಿದ್ಯೆಗಳಲ್ಲಿ ಒಂದು. ಸ್ವಾಸ್ಥ್ಯ ದೇಹ ಮತ್ತು ಸ್ವಾಸ್ಥ್ಯ ಮನಸ್ಸಿಗಾಗಿ ಯೋಗ ಅವಶ್ಯಕವಾಗಿದೆ. ಮೈಸೂರು ಸಂಸ್ಥಾನದಲ್ಲಿ ಅಂದು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕೃಷ್ಣಮಾಚಾರಿ ಯೋಗದ ಗುರುವಾಗಿದ್ದರು. ಇಂದು ಮೈಸೂರು ಯೋಗ ಶಾಲೆಯು ತನ್ನ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ ಎಂದರು.

ಮಾನಸಿಕವಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಪ್ರತಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚಲಾಗುತ್ತಿದೆ. ಈ ಬಾರಿ 5 ಸಾವಿರ ಪ್ರತಿಗಳನ್ನು ವಿತರಿಸುತ್ತಿದ್ದು, ಮಂದೆ 10 ಲಕ್ಷ ಪ್ರತಿಗಳನ್ನು ಹಂಚುವ ನಿಟ್ಟಿನಲ್ಲಿದ್ದೇವೆ ಎಂದು ಮೈಸೂರು ಯೋಗ ಶಾಲೆಯ ಸಂಸ್ಥಾಪಕ ಅಧ‍್ಯಕ್ಷ ಯೋಗಪ್ರಕಾಶ ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಕವಯಿತ್ರಿ ಡಾ.ಪುಷ್ಪಾ ಐಯ್ಯಂಗಾರ್, ಮೈಸೂರಿನ ಶೃಂಗೇರಿ ಶ್ರೀ ಶಾರದಾಂಬ ದೇವಸ್ಥಾನದ ಉಪಾಧ‍್ಯಕ್ಷ ಎಂ.ಎಲ್. ಕಲ್ಯಾಣ್ ಕುಮಾರ್, ಹಿಮಾಲಯ ಫೌಂಡೇಶನ್ ಸಂಸ್ಥಾಪಕ ಎನ್.ಅನಂತ ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: