ಮೈಸೂರು

ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಾಕಿರುವ ಎಫ್.ಐ.ಅರ್ ನ್ನು ಸರ್ಕಾರ ತಕ್ಷಣ ಹಿಂಪಡೆದು ನ್ಯಾಯ ಒದಗಿಸುವಂತೆ ಒತ್ತಾಯ

ಮೈಸೂರು,ಆ.29:- ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಪೊಲೀಸ್ ಇಲಾಖೆ ಹಾಕಿರುವ ಎಫ್.ಐ.ಅರ್ ನ್ನು ಸರ್ಕಾರ ತಕ್ಷಣ ಹಿಂಪಡೆದು ನ್ಯಾಯ ಒದಗಿಸುವಂತೆ ಒತ್ತಾಯಿಸಲು ವಿವಿಧ ಸಂಘಟನೆಗಳು ಇಂದು ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಲದರ್ಶಿನಿಯಲ್ಲಿಂದು ವಿವಿಧ ಸಂಘಟನೆಗಳು ಸೇರಿ ಸಭೆ ನಡೆಸಿದ್ದು, ಬೆಳಗಾವಿಯ ಪೀರನವಾಡಿಯಲ್ಲಿ ನಡೆದ ಗಲಭೆ ನಿಜಕ್ಕೂ ಕನ್ನಡಿಗರ ಮೇಲೆ ಕನ್ನಡ ನಾಡಿನಲ್ಲೇ ಆಗುತ್ತಿರುವ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ. ಅಂದಿನ ದಿನವೇ ಬೆಳಗಾವಿಯಲ್ಲಿ ಸುಮಾರು 20 ಜನ ಕನ್ನಡ ಹೋರಾಟಗಾರರ ಮೇಲೆ ಪೊಲೀಸ್ ಇಲಾಖೆ ಸ್ವಯಂ ದೂರು ದಾಖಲಿಸಿ ಕೊಂಡು ಐ.ಪಿ.ಸಿ 143 ( ಅಕ್ರಮವಾಗಿ ಗುಂಪು ಗೂಡುವುದು ) ಐ.ಪಿ.ಸಿ 147 ( ದೊಂಬಿ ) ಐ.ಪಿ.ಸಿ 148 ( ಮಾರಕಾಸ್ತ್ರ ಹಿಡಿದು ದೊಂಬಿ ) ಐ.ಪಿ.ಸಿ 447 ( ಅಕ್ರಮ ಪ್ರವೇಶ ) ಹಾಗೂ ತೆರೆದ ಪ್ರದೇಶ ವಿರೂಪ ಕಾಯ್ದೆ ಅಡಿಯೂ ಎಫ್.ಐ.ಅರ್ ದಾಖಲಿಸಿ ನಮ್ಮ ನಾಡಿನಲ್ಲೆ ನಮ್ಮ ಹೋರಾಟಗಾರರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿರುವ ಪೊಲೀಸ್ ಇಲಾಖೆಯ ವರ್ತನೆ ನಿಜಕ್ಕೂ ಖಂಡನೀಯ ಎಂದರು. ಸರ್ಕಾರ ಕೂಡಲೇ ಕನ್ನಡಿಗರ ಮೇಲೆ ಹಾಕಿರುವ ಕೇಸ್ ಹಿಂಪಡೆದು ಕನ್ನಡಿಗರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲು ತೀರ್ಮಾನಿಸಿದರು.
ಸಭೆಯಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ , ಧನಪಾಲ್ ಕುರುಬರಹಳ್ಳಿ , ಮಡ್ಡೀಗೆರೆ ಗೋಪಾಲ್ , ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಧ್ಯಕ್ಷರಾದ ಕೆ.ಎಸ್ ಶಿವರಾಮು, ಕರುಣಾಕರನ್ , ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ದೇವಪ್ಪ ನಾಯಕ , ಡಾ ರಾಜ್ ಕನ್ನಡ ಕನ್ನಡ ಸೇನೆ ಅಧ್ಯಕ್ಷರಾದ ಮಹಾದೇವ ಸ್ವಾಮಿ , ಪರಿಸರ ಬಾನುಮೋಹನ್ , ಅರ್.ಕೆ ರವಿ , ಕುಮಾರ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: