ಪ್ರಮುಖ ಸುದ್ದಿಮೈಸೂರು

ಅಭಿರಾಮ್ ಜಿ.ಶಂಕರ್ ಪ್ರಾಮಾಣಿಕ ಅಧಿಕಾರಿ, ಕೊರೋನಾ ನಿರ್ವಹಣೆಯ ಸೇವೆ ಮರೆಯಲಾಗದು : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಆ.29:- ಮೈಸೂರು ಜಿಲ್ಲಾಧಿಕಾರಿಯಾಗಿ 2 ವರ್ಷ 4 ತಿಂಗಳ ಕಾಲ ಕಾರ್ಯನಿರ್ವಹಿಸಿದ ಅಭಿರಾಂ ಜಿ. ಶಂಕರ್ ಅವರು ಒಬ್ಬ ಪ್ರಾಮಾಣಿಕ ಅಧಿಕಾರಿ. ಜಿಲ್ಲೆಯಲ್ಲಿ ಉತ್ತಮ ಹಾಗೂ ದಕ್ಷ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಕೊರೋನಾದಂತಹ ಸಂಕಷ್ಟದ ಕಾಲದಲ್ಲೂ ಜಿಲ್ಲೆಯನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 6 ತಿಂಗಳ ಮಗು ಹಾಗೂ ಕುಟುಂಬದವರಿಂದಲೂ ದೂರವಿದ್ದು, ಕಾರ್ಯನಿರ್ವಹಣೆ ಮಾಡಿದ್ದಾರೆ. ಅವರ ಇಂತಹ ಸೇವೆಯನ್ನು ಎಂದೂ ಮರೆಯಲಾಗದು.

ಹತ್ತಾರು ಜಿಲ್ಲಾಧಿಕಾರಿಗಳನ್ನು ನೋಡಿದ್ದೇನೆ. ಆದರೆ, ಜನರ ಮಧ್ಯೆ ನಿಂತು ಕಾರ್ಯನಿರ್ವಹಿಸುವ ಅಧಿಕಾರಿಯಾಗಿದ್ದಾರೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕೂರದೆ ಜನರ ಸಂಕಷ್ಟಗಳಿಗೆ ಹತ್ತಿರಕ್ಕೆ ಹೋಗಿ ಓಗೊಟ್ಟವರು ಇವರಾಗಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ದಸರಾ, ಚುನಾವಣೆ ಹಾಗೂ ಪ್ರವಾಹ ಸಂದರ್ಭಗಳಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಣೆ ಮಾಡಿದ್ದಲ್ಲದೆ, ಎಲ್ಲರ ವಿಶ್ವಾಸದೊಂದಿಗೆ ದಕ್ಷ ಆಡಳಿತವನ್ನು ನೀಡಿದ್ದಾರೆ.

ಇದೀಗ ಕೇಂದ್ರ ಸರ್ಕಾರದ ಉನ್ನತ ತರಬೇತಿಗಾಗಿ ಮಸ್ಸೂರಿಗೆ ಹೋಗುವವರಿದ್ದು, ಅವರ ಮುಂದಿನ ವೃತ್ತಿಜೀವನವು ಇದೇ ರೀತಿಯ ಯಶಸ್ಸು ಲಭಿಸಲೆಂದು ಆಶಿಸುತ್ತೇನೆ.

Leave a Reply

comments

Related Articles

error: